ಸಾಮೂಹಿಕ ಅತ್ಯಾಚಾರ ಸಮಾಜ ತಲೆತಗ್ಗಿಸುವ ಕೆಲಸ: ಬೊಂಡಾಲ ಚಿತ್ತರಂಜನ್ ಶೆಟ್ಟಿ

ಬಂಟ್ವಾಳ ಜು. 3: ಪುತ್ತೂರು ಕಾಲೇಜೊಂದರ ವಿದ್ಯಾರ್ಥಿನಿಯ ಮೇಲೆ ಆಗಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಅಮಾನವೀಯ, ಕಾನೂನು ಬಾಹಿರ, ಸಮಾಜ ತಲೆತಗ್ಗಿಸುವ ಕೆಲಸ ಎಂದು ದ.ಕ.ಜಿಲ್ಲಾ ಇಂಟಕ್ ಪ್ರ.ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ನಮ್ಮ ಹೆಮ್ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದಕ್ಕೆ ಪೋಷಕರು ಬಹಳ ಯೋಚಿಸುವಂತಿದೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ ವಂಚಿತ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಜಾತಿ ಮತ ಪಂಥ ಧರ್ಮವನ್ನು ಮೀರಿ ರಾಜಕೀಯ ರಹಿತವಾಗಿ ಖಂಡಿಸಬೇಕು. ಅನ್ಯಾಯಕ್ಕೆ ಸರಿಯಾದ ಶಿಕ್ಷೆ ನೀಡುವಂತಾಗಬೇಕು. ದ.ಕ.ಜಿಲ್ಲೆ ಬುದ್ಧಿವಂತರ ಜಿಲ್ಲೆ ಇಂದು ಕೊಲೆಗಡುಕರ ಅತ್ಯಾಚಾರಿಗಳ ಜಿಲ್ಲೆಯಾಗಿ ಮಾರ್ಪಾಡಾಗುತ್ತಿರುವುದು ಬೇಸರದ ಸಂಗತಿ. ಈ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಗಂಭೀರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
Next Story





