ಹಾಂಕಾಂಗ್ ಪ್ರತಿಭಟನೆ ಆಡಳಿತ ಸೂತ್ರಕ್ಕೆ ಸವಾಲು: ಚೀನಾ
ಬೀಜಿಂಗ್, ಜು. 3: ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ನಗರದ ಆಡಳಿತ ಸೂತ್ರಕ್ಕೆ ಎದುರಾದ ಸವಾಲಾಗಿದೆ ಎಂದು ಚೀನಾ ಮಂಗಳವಾರ ಹೇಳಿದೆ.
ಚೀನಾ ವಿರೋಧಿ ಪ್ರತಿಭಟನಕಾರರು ಹಾಂಕಾಂಗ್ ಸಂಸತ್ತಿಗೆ ನುಗ್ಗಿ ದಾಂಧಲೆಗೈದ ಹಾಗೂ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ ಗಂಟೆಗಳ ಬಳಿಕ ಹಾಂಕಾಂಗ್ ವ್ಯವಹಾರಗಳ ಕಚೇರಿಯ ವಕ್ತಾರರೊಬ್ಬರು ಈ ಹೇಳಿಕೆ ನೀಡಿರುವುದಾಗಿ ಚೀನಾದ ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಹಾಂಕಾಂಗನ್ನು ಬ್ರಿಟನ್ ಚೀನಾಕ್ಕೆ 1997ರಲ್ಲಿ ಹಸ್ತಾಂತರಿಸಿದ್ದು, ಅದರ 22ನೇ ವಾರ್ಷಿಕ ದಿನವಾದ ಸೋಮವಾರ ಜನರು ಭಾರೀ ಸಂಖ್ಯೆಯಲ್ಲಿ ಚೀನಾ ವಿರೋಧಿ ಪ್ರತಿಭಟನೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
Next Story