ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಮೆಂಟ್: ಅರ್ಜೆಂಟೀನವನ್ನು ಮಣಿಸಿದ ಬ್ರೆಝಿಲ್ ಫೈನಲ್‌ಗೆ ಲಗ್ಗೆ

ರಿಯೋ ಡಿಜನೈರೊ, ಜು.3: ಅರ್ಜೆಂಟೀನವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಆತಿಥೇಯ ಬ್ರೆಝಿಲ್ ತಂಡ 2007ರ ಬಳಿಕ ಮೊದಲ ಬಾರಿ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದೆ. ಮಂಗಳವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಗ್ಯಾಬ್ರಿಯಲ್ ಜೀಸಸ್(19ನೇ ನಿಮಿಷ) ಹಾಗೂ ರಾಬರ್ಟೊ ಫಿರ್ಮಿನೊ(71ನೇ ನಿಮಿಷ)ತಲಾ ಒಂದು ಗೋಲು ಗಳಿಸುವುದರೊಂದಿಗೆ ಬ್ರೆಝಿಲ್ ತಂಡವನ್ನು ಫೈನಲ್‌ಗೆ ತಲುಪಿಸಿದರು.
ಮಿನೆರಾವೊ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಐದನೇ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿರುವ ಬ್ರೆಝಿಲ್ ಎರಡನೇ ಸೆಮಿ ಫೈನಲ್‌ನಲ್ಲಿ ಗೆಲ್ಲಲಿರುವ ಹಾಲಿ ಚಾಂಪಿಯನ್ ಚಿಲಿ ಅಥವಾ ಪೆರು ತಂಡವನ್ನು ಎದುರಿಸಲಿದೆ.
ಅರ್ಜೆಂಟೀನ ಮತ್ತೊಮ್ಮೆ ಪ್ರಮುಖ ಘಟ್ಟದಲ್ಲಿ ಎಡವಿದೆ. ಮೆಸ್ಸಿ ಟೂರ್ನಮೆಂಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರೂ ತನ್ನ ರಾಷ್ಟ್ರೀಯ ತಂಡದ ಪರ ಪ್ರಮುಖ ಅಂತರ್‌ರಾಷ್ಟ್ರೀಯ ಟ್ರೋಫಿ ಜಯಿಸಬೇಕೆಂಬ ಕನಸು ಈಡೇರಲಿಲ್ಲ.
Next Story





