Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸಕ್ಕರೆಯ ಪರ್ಯಾಯ ಖರ್ಜೂರದ ಆರೋಗ್ಯಲಾಭಗಳ...

ಸಕ್ಕರೆಯ ಪರ್ಯಾಯ ಖರ್ಜೂರದ ಆರೋಗ್ಯಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಾರ್ತಾಭಾರತಿವಾರ್ತಾಭಾರತಿ4 July 2019 6:40 PM IST
share
ಸಕ್ಕರೆಯ ಪರ್ಯಾಯ  ಖರ್ಜೂರದ ಆರೋಗ್ಯಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

 ಆರೋಗ್ಯವೇ ಸಂಪತ್ತು. ಉತ್ತಮ ಆರೊಗ್ಯವೇ ನಮ್ಮ ಅತ್ಯಮೂಲ್ಯ ಆಸ್ತಿ. ಆದರೆ ಇಂದಿನ ಅವಸರದ ಯುಗದಲ್ಲಿ ನಾವು ಫಾಸ್ಟ್ ಫುಡ್, ಸಂಸ್ಕರಿತ ಆಹಾರ ಇತ್ಯಾದಿಗಳಿಗೆ ಮೊರೆ ಹೋಗುವುದೇ ಹೆಚ್ಚು ಮತ್ತು ನಮ್ಮ ಧಾವಂತದಲ್ಲಿ ಪ್ಯಾಕ್ ಮಾಡಲಾದ ದಿಢೀರ್ ಆಹಾರಗಳ ಸೇವನೆಯಿಂದ ಉಂಟಾಗಬಹುದಾದ ಹಾನಿಯನ್ನು ಪೂರ್ಣವಾಗಿ ಕಡೆಗಣಿಸುತ್ತಿದ್ದೇವೆ. ಅಧಿಕ ಪ್ರಮಾಣದ ಸಕ್ಕರೆ,ಸಂರಕ್ಷಕಗಳು ಮತ್ತು ಇತರ ಅನಾರೋಗ್ಯಕಾರಿ ಅಂಶಗಳಿಂದ ಕೂಡಿರುವ ಇಂತಹ ಆಹಾರಗಳು ಆರೋಗ್ಯಕ್ಕೆ ಬೆದರಿಕೆ ಎಂದೇ ಹೇಳಬಹುದು. ಇಂತಹ ಆಹಾರಗಳ ಆಕರ್ಷಣೆಯ ಸುಳಿಯಲ್ಲಿ ಸಿಲುಕುವ ಮೊದಲೇ ಅವು ನಿಮ್ಮ ಶರೀರದಲ್ಲಿ ಉಂಟು ಮಾಡುವ ರೋಗಗಳ ಬಗ್ಗೆ ನಿಮಗೆ ನೆನಪಿರಲಿ.

ಇತರ ಯಾವುದೇ ವಸ್ತುವಿಗಿಂತ ಮೊದಲು ನೀವು ಗಮನ ಕೊಡಬೇಕಾದ್ದು ಸಕ್ಕರೆಯ ಬಗ್ಗೆ. ಸಕ್ಕರೆ ನಮ್ಮ ಆಹಾರದಲ್ಲಿರಲೇ ಬೇಕು,ಆದರೆ ದಿನವೂ ಅತಿಯಾಗಿ ಸೇವಿಸುತ್ತಿದ್ದರೆ ನಮ್ಮ ಆರೋಗ್ಯಕ್ಕೆ ಅದರಷ್ಟು ಅಪಾಯಕಾರಿಯಾದುದು ಇನ್ನೊಂದಿಲ್ಲ. ಹಾಗಾದರೆ ನಮ್ಮ ಆಹಾರದಿಂದ ಸಿಹಿಯನ್ನು ವರ್ಜಿಸಬೇಕೇ? ಇಲ್ಲ,ಆದರೆ ಅದಕ್ಕೆ ಪರ್ಯಾಯವನ್ನು ಬಳಸಬಹುದು. ಹೌದು,ನೀವು ಸರಿಯಾಗಿಯೇ ಓದಿದ್ದೀರಿ. ಸಕ್ಕರೆಗೆ ಪರಿಪೂರ್ಣ ಪರ್ಯಾಯವಿದೆ. ಖರ್ಜೂರ ಸಕ್ಕರೆ, ತೆಂಗಿನ ಸಕ್ಕರೆ, ಸ್ಟೀವಿಯಾ, ಬೆಲ್ಲ ಇತ್ಯಾದಿಗಳು ಸಕ್ಕರೆಯ ಬದಲಾಗಿ ಬಳಸಬಹುದಾದ ನೈಸರ್ಗಿಕ ಸಿಹಿಗಳಾಗಿವೆ. ನಿಮ್ಮ ಆಹಾರದಲ್ಲಿ ಸಿಹಿಯನ್ನು ಸೇರಿಸಿಕೊಳ್ಳಲು ಉತ್ತಮ ವಿಧಾನವೆಂದರೆ ಸಕ್ಕರೆಯ ಬದಲು ಖರ್ಜೂರವನ್ನು ಬಳಸುವುದು. ಖರ್ಜೂರವು ನೈಸರ್ಗಿಕ ಫ್ರುಕ್ಟೋಸ್‌ನ ಸಮೃದ್ಧ ಮೂಲವಾಗಿದೆ. ನಿಸರ್ಗದತ್ತ ಹಣ್ಣುಗಳಲ್ಲಿರುವ ಫ್ರುಕ್ಟೋಸ್ ಯಾವುದೇ ರೀತಿಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕವಲ್ಲ. ಇಲ್ಲಿವೆ ಖರ್ಜೂರದ ಅದ್ಭುತ ಆರೋಗ್ಯ ಲಾಭಗಳ ಕುರಿತು ಮಾಹಿತಿ.....

►ಗ್ರಹಣ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಖರ್ಜೂರವು ಮಿದುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮಿದುಳಿನ ಕೋಶಗಳಿಗೆ ಅಕಾಲಿಕ ಹಾನಿಯನ್ನು ತಡೆಗಟ್ಟುತ್ತದೆ. ನೀವು ಸಕ್ಕರೆಯ ಬದಲಾಗಿ ಖರ್ಜೂರವನ್ನು ಬಳಸಲು ಆರಂಭಿಸಿದ ಮೇಲೆ ಉತ್ತಮ ಗ್ರಹಣ ಶಕ್ತಿ,ಚುರುಕಾದ ನೆನಪು,ಕಡಿಮೆ ದಣಿವು,ಕ್ರಿಯಾಶೀಲ ಮನಸ್ಸು ಮತ್ತು ಇತರ ಹಲವಾರು ಲಾಭಗಳು ನಿಮ್ಮ ಅನುಭವಕ್ಕೆ ಬರಬಹುದು.

►ಜೀರ್ಣಶಕ್ತಿಯಲ್ಲಿ ಸುಧಾರಣೆ

ಖರ್ಜೂರದ ಸಕ್ಕರೆಯು ನಿಮ್ಮ ಹೊಟ್ಟೆಗೂ ಒಳ್ಳೆಯದು ಗೊತ್ತೇ? ಅದು ಸಮೃದ್ಧ ಪ್ರಮಾಣದಲ್ಲಿ ನಾರನ್ನು ಒಳಗೊಂಡಿರುತ್ತದೆ ಮತ್ತು ಕರುಳಿನ ಚಲನೆಯನ್ನು ಉತ್ತಮಗೊಳಿಸುವ ಮೂಲಕ ಜಠರವನ್ನು ಆರೋಗ್ಯಯುತವಾಗಿರಿಸುತ್ತದೆ ಹಾಗೂ ಮಲಬದ್ಧತೆಯನ್ನು ತಡೆಯುತ್ತದೆ. ನಮ್ಮ ಹೊಟ್ಟೆಯ ಭಾಗವು ಆರೋಗ್ಯಯುತವಾಗಿದ್ದರೆ ನಮ್ಮ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆಯಾದಂತೆಯೇ.

►ರೋಗಗಳ ವಿರುದ್ಧ ಹೋರಾಡುತ್ತದೆ

ಖರ್ಜೂರವು ಸಮೃದ್ಧ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ನಮ್ಮ ಶರೀರದ ಕೋಶಗಳ ಪಾಲಿಗೆ ಮಹತ್ವದ್ದಾಗಿರುವ ಉತ್ಕರ್ಷಣ ನಿರೋಧಕಗಳು ಅವು ಫ್ರೀ ರ್ಯಾಡಿಕಲ್‌ಗಳಿಂದ ಹಾನಿಗೀಡಾಗುವುದನ್ನು ತಡೆಯುತ್ತವೆ. ಫ್ಲಾವನಾಯ್ಡ್ ಗಳು,ಕ್ಯಾರೊಟಿನಾಯ್ಡ್ ಗಳು ಮತ್ತು ಫಿನಾಲಿಕ್ ಆ್ಯಸಿಡ್ ಇವು ಖರ್ಜೂರದಲ್ಲಿರುವ ಮೂರು ಮುಖ್ಯ ಉತ್ಕರ್ಷಣ ನಿರೋಧಕಗಳಾಗಿವೆ. ಈ ಎಲ್ಲ ಉತ್ಕರ್ಷಣ ನಿರೋಧಕಗಳು ದೀರ್ಘಕಾಲಿಕ ರೋಗಗಳ ವಿರುದ್ಧ ಹೋರಾಡುತ್ತವೆ ಮತ್ತು ನಮ್ಮ ಶರೀರವನ್ನು ಆರೋಗ್ಯಯುತ ಮತ್ತು ಕ್ರಿಯಾಶೀಲವನ್ನಾಗಿರಿಸುತ್ತವೆ. ಅಲ್ಲದೆ ಉತ್ಕರ್ಷಣ ನಿರೋಧಕವು ಚರ್ಮಕ್ಕೆ ಹೊಳಪನ್ನು ನೀಡುತ್ತದೆ ಮತ್ತು ಮೊದಲಿಗಿಂತ ಹೆಚ್ಚಿನ ತಾರುಣ್ಯವನ್ನುಂಟು ಮಾಡುತ್ತದೆ.

►ರಕ್ತದಲ್ಲಿಯ ಸಕ್ಕರೆ ಮಟ್ಟಗಳನ್ನು ನಿಯಂತ್ರಿಸುತ್ತದೆ

ಖರ್ಜೂರವು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಣ ದಲ್ಲಿರಿಸಲು ನೆರವಾಗುತ್ತದೆ. ಹೀಗಾಗಿ ಮಧುಮೇಹಿಗಳು ತಾವು ಸಿಹಿಯನ್ನು ಸೇವಿಸುವುಂತಿಲ್ಲ ಎಂದು ನಿರಾಶರಾ ಗಬೇಕಿಲ್ಲ,ಹಾಯಾಗಿ ಖರ್ಜೂರವನ್ನು ಸೇವಿಸಬಹುದು ಮತ್ತು ಮೊದಲಿಗಿಂತ ಹೆಚ್ಚು ಉಲ್ಲಸಿತರಾಗಿರಬಹುದು.

►ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

ಖರ್ಜೂರವು ವಿವಿಧ ವಿಟಾಮಿನ್‌ಗಳು ಹಾಗೂ ಕ್ಯಾಲ್ಸಿಯಂ,ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಮ್‌ನಂತಹ ಖನಿಜಗಳನ್ನು ಒಳಗೊಂಡಿದ್ದು,ಇವು ನಮ್ಮ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಖರ್ಜೂರ ಸೇವನೆಯಿಂದ ಅಸ್ಥಿರಂಧ್ರತೆ ಉಂಟಾಗುವುದನ್ನು ತಡೆಯಬಹುದು.

ಹೀಗಾಗಿ ಮುಂದಿನ ಸಲ ಸಿಹಿಖಾದ್ಯ ತಯಾರಿಕೆಯಲ್ಲಿ ಸಕ್ಕರೆಯ ಬದಲು ಖರ್ಜೂರ ಬಳಕೆಯಾಗುವಂತೆ ನೋಡಿಕೊಳ್ಳಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕ ಸಿಹಿಯನ್ನು ಸವಿಯಿರಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X