Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 7 ಶೇಕಡ ಜಿಡಿಪಿ ಬೆಳವಣಿಗೆಯ ನಿರೀಕ್ಷೆ:...

7 ಶೇಕಡ ಜಿಡಿಪಿ ಬೆಳವಣಿಗೆಯ ನಿರೀಕ್ಷೆ: ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು

2019-20ರ ಸಾಲಿನಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡನೆ

ವಾರ್ತಾಭಾರತಿವಾರ್ತಾಭಾರತಿ4 July 2019 9:06 PM IST
share
7 ಶೇಕಡ ಜಿಡಿಪಿ ಬೆಳವಣಿಗೆಯ ನಿರೀಕ್ಷೆ: ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು

 ಹೊಸದಿಲ್ಲಿ, ಜು.1: ಹಾಲಿ ಹಣಕಾಸು ವರ್ಷದಲ್ಲಿ ದೇಶವು 7 ಶೇಕಡ ಆರ್ಥಿಕ ಬೆಳವಣಿಗೆಯನ್ನು ಕಾಣಲಿದೆಯೆಂದು 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ. ಕಳೆದ ವರ್ಷ ದೇಶದ ಆರ್ಥಿಕ ಬೆಳವಣಿಗೆ ದರವು ಶೇ.6.8 ಆಗಿದ್ದು, ಈ ಬಾರಿ ತುಸು ಹೆಚ್ಚಳವನ್ನು ಕಾಣಲಿದೆ.

ಕೇಂದ್ರ ಬಜೆಟ್ ಮಂಡನೆಯ ಮುನ್ನಾ ದಿನವಾದ ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್‌ನಲ್ಲಿ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಮಂದಗತಿಯ ಅರ್ಥಿಕತೆಯ ಹಿನ್ನೆಲೆಯಲ್ಲಿ ವಿತ್ತೀಯ ಕ್ಷೇತ್ರದಲ್ಲಿ ಭಾರತವು ಬಹುದೊಡ್ಡ ಸವಾಲನ್ನು ಎದುರಿಸುತ್ತಿದೆಯೆಂದು ಸಮೀಕ್ಷೆಯು ಆತಂಕ ವ್ಯಕ್ತಪಡಿಸಿದೆೆ. ಆದಾಗ್ಯೂ ಗ್ರಾಹಕ ಬೇಡಿಕೆ ಹಾಗೂ ಬ್ಯಾಂಕ್ ಸಾಲ ನೀಡಿಕೆಯಲ್ಲಿ ಸುಧಾರಣೆಯಾಗಲಿರುವ ಹಿನ್ನೆಲೆಯಲ್ಲಿ ಹೂಡಿಕೆ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆಯೆಂದು ಅದು ಆಶಾವಾದ ವ್ಯಕ್ತಪಡಿಸಿದೆ. 2032ರ ಒಳಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲು ಮೂಲ ಸೌಕರ್ಯ ಅಭಿವೃದ್ಧಿ ಅಗತ್ಯವೆಂದು ವರದಿಯು ಹೇಳಿದೆ.

ಕಳೆದ ಸಾಲಿನಲ್ಲಿ 6.8 ಶೇಕಡದಷ್ಟಿದ್ದ ಜಿಡಿಪಿ ದರವು 2019-20ರ ಸಾಲಿನಲ್ಲಿ 7 ಶೇಕಡದಷ್ಟಾಗಲಿದ್ದು, ಈ ಅತ್ಯಲ್ಪ ಸುಧಾರಣೆಯ ಹೊರತಾ ಗಿಯೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

‘‘ಭಾರತದ ನೈಜ ಜಿಡಿಪಿಯು ಕಳೆದ ಐದು ವರ್ಷಗಳಲ್ಲಿ (2014-15ರಿಂದ ಮೊದಲ್ಗೊಂಡು) ಸರಕಾರಿ 7.5 ಶೇಕಡ ಬೆಳವಣಿಗೆ ಸಾಧಿಸಿದೆಯೆಂದೂ ಸಮೀಕ್ಷೆ ಬೆಟ್ಟು ಮಾಡಿ ತೋರಿಸಿದೆ.

 “2024-25ರ ಸಾಲಿನೊಳಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ಸಾಧಿಸಲು ಭಾರತವು 8 ಶೇಕಡ ದರದ ನೈಜ ಜಿಡಿಪಿ ಬೆಳವಣಿಗೆಯನ್ನು ಉಳಿಸಿಕೊಂಡು ಬರಬೇಕಾದ ಅಗತ್ಯವಿದೆ’’ ಎಂದು ಅದು ಹೇಳಿದೆ.

 ಮೂಲಸೌಕರ್ಯಗಳ ಮೇಲಿನ ತನ್ನ ವಾರ್ಷಿಕ ವೆಚ್ಚವನ್ನು ಭಾರತವು ಎರಡು ಪಟ್ಟು ಅಂದರೆ 200 ಶತಕೋಟಿ ಡಾಲರ್ ಹಣವನ್ನು ವ್ಯಯಿಸಬೇಕಾದ ಅಗತ್ಯವಿದೆಯೆಂದು ಸಮೀಕ್ಷೆ ಪ್ರತಿಪಾದಿಸಿದೆ.

  ಮೂಲಸೌಕರ್ಯ ಅಭಿವೃದ್ಧಿಗಾಗಿ ದೇಶಕ್ಕೆ 100ರಿಂದ 110 ಶತಕೋಟಿ ಡಾಲರ್ ಹಣವನ್ನು ಹೂಡಿಕೆ ಮಾಡಲು ಮಾತ್ರವೇ ಸಾಧ್ಯವಾಗಿದೆ ಎಂದು ತಿಳಿಸಿರುವ ವರದಿಯು, ‘‘ನವೀನವಾದ ವಿಧಾನಗಳ’’ ಮೂಲಕ ಹಣಕಾಸು ಕ್ರೋಢೀಕರಿಸುವ ಮೂಲಕ ಹೂಡಿಕೆಯಲ್ಲಿನ ಈ ಬೃಹತ್ ಅಂತರವನ್ನು ತುಂಬಬಹುದಾ ಗಿದೆಯೆಂದು ಅದು ಹೇಳಿದೆ.

ಆರ್ಥಿಕತೆಯ ಬೆಳವಣಿಗೆ ಹಾಗೂ ಮೂಲಸೌಕರ್ಯಗಳ ನಡುವೆ ಬಲವಾದ ನಂಟಿರುವುದನ್ನು ಬೆಟ್ಟು ಮಾಡಿತೋರಿಸಿರುವ ವರದಿಯು, ಭಾರತವು ತನ್ನ ಜಿಡಿಪಿಯ ಶೇ.7-8ರಷ್ಟು ಹಣವನ್ನು ವಾರ್ಷಿಕವಾಗಿ ಮೂಲಸೌಕರ್ಯಗಳಿಗೆ ವೆಚ್ಚ ಮಾಡುವ ಅಗತ್ಯವಿದೆ ಎಂದು ಸಮೀಕ್ಷೆಯು ಹೇಳಿದೆ.

 ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಉತ್ತೇಜಿಸಲು ರಾಷ್ಟ್ರೀಯ ಹೂಡಿಕೆ ಹಾಗೂ ಮೂಲಸೌಕರ್ಯ ನಿಧಿಯನ್ನು ಸೃಷ್ಟಿಸಲಾಗಿದೆ. ವಾಣಿಜ್ಯತ್ಮಾಕವಾಗಿ ಕಾರ್ಯಸಾಧ್ಯ ಯೋಜನೆಗಳಿಗೆ ಹೂಡಿಕೆಯ ಅವಕಾಶವನ್ನು ಒದಗಿಸಲು ಅಂದಾಜು 400 ಶತಕೋಟಿ ಡಾಲರ್ ಬಂಡವಾಳವನ್ನು ಈ ನಿಧಿ ಹೊಂದಿದೆ.

  2018-19ರ ಸಾಲಿನಲ್ಲಿ ದೇಶದಲ್ಲಿ ಒಟ್ಟು 107 ವಿಮಾನನಿಲ್ದಾಣಗಳು ಕಾರ್ಯಾಚರಿಸಿವೆ. ವಿಮಾನನಿಲ್ದಾಣ ಕ್ಷೇತ್ರದಲ್ಲಿ ಜಂಟಿ ಉದ್ಯಮದ ಯಶಸ್ವಿ ಕಾರ್ಯನಿರ್ವಹಣೆಯನ್ನು ಆಧರಿಸಿ ಕೇಂದ್ರ ಸರಕಾರವು ಗುವಾಹಟಿ,ಲಕ್ನೋ, ಜೈಪುರ, ಅಹ್ಮದಾಬಾದ್, ಮಂಗಳೂರು ಹಾಗೂ ತಿರುವನಂತಪುರಂ ವಿಮಾನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮೂಲಕ ಭೋಗ್ಯ (ಲೀಸ್)ಕ್ಕೆ ನೀಡಿವೆ ಎಂದು ಸಮೀಕ್ಷೆ ತಿಳಿಸಿದೆ.

ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯಮ್ ನೇತೃತ್ವದ ತಂಡವು ಈ ವರದಿಯನ್ನು ಪತಿಲಿಗೆ,

ವರದಿಯ ಮುಖ್ಯಾಂಶಗಳು...

► 2019-20ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಶೇ.7 ಏರಿಕೆಯಾಗಲಿದ್ದು, ಇದು ಕಳೆದ ವಿತ್ತ ವರ್ಷದ 6.8 ಶೇಕಡಕ್ಕಿಂತ ತುಸು ಅಧಿಕವಾಗಿದೆ.

► 2024-2025ರ ಸಾಲಿನಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಸತತವಾಗಿ 8 ಶೇಕಡ ಜಿಡಿಪಿ ಬೆಳವಣಿಗೆಯ ಅಗತ್ಯವಿದೆ.

► 2019-20ರ ಸಾಲಿನಲ್ಲಿ ಕಚ್ಚಾ ತೈಲ ದರಗಳು ಕುಸಿಯುವ ನಿರೀಕ್ಷೆಯಿದೆ.

► ಉದ್ಯೋಗಗಳ ಸೃಷ್ಟಿ, ಬೆಳವಣಿಗೆ ಹಾಗೂ ಉತ್ಪಾದನಾಶೀಲತೆಯನ್ನು ಹೆಚ್ಚಿಸಲು ಸೂಕ್ಷ್ಮ,ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳ ಕುರಿತಾಗಿ ಹೊಸ ನೀತಿ ರೂಪಿಸಬೇಕಾಗಿದೆ.

► ವೃದ್ಧರ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂತನ ಯೋಜನೆಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ಇದರಿಂದಾಗಿ ಆರೋಗ್ಯಪಾಲನೆ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಹೆಚ್ಚಳ ಹಾಗೂ ಹಂತಹಂತವಾಗಿ ನಿವೃತ್ತಿ ವಯಸ್ಸಿನಲ್ಲಿ ಏರಿಕೆ ಮಾಡುವ ಅಗತ್ಯವುಂಟಾಗಲಿದೆ.

► ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಸಾಧಿಸುವುದಕ್ಕೆ ಕಡಿಮೆ ವೇತನ ಹಾಗೂ ವೇತನದಲ್ಲಿ ಅಸಮಾನತೆಯು ಗಂಭೀರವಾದ ಅಡೆತಡೆಗಳಾಗಿ ಉಳಿದಿವೆ.

► ಸಾಂಪ್ರದಾಯಿಕ ವಾಹನಗಳಿಗೆ ಪರ್ಯಾಯವಾಗಿ ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚು ಜನಾಕರ್ಷಕವಾಗುವಂತೆ ಮಾಡಬೇಕಾಗಿದೆ.

► ಬೃಹತ್ ಪ್ರಮಾಣದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸ ಬೇಕಾಗಿದೆ. ಖಾಸಗಿ ಹೂಡಿಕೆಯನ್ನು ಹೆಚ್ಚಿಸಿದಲ್ಲಿ ಉದ್ಯೋಗವಕಾಶಗಳ ಸೃಷ್ಟಿಗೆ ಹೆಚ್ಚಿನ ವೇಗ ದೊರೆಯಲಿದೆ.

► ವಿದೇಶಿ ಹೂಡಿಕೆಯ ಮೇಲೆ ವಿಧಿಸಲಾಗಿರುವ ನಿಯಂತ್ರಣಗಳನ್ನು ಸಡಿಲುಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

►  2018-19ರ ಸಾಲಿನಲ್ಲಿ 283.4 ದಶಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ.

►  2018-19ರ ಸಾಲಿನಲ್ಲಿ 5.8 ಶೇಕಡ ಸಾಮಾನ್ಯ ವಿತ್ತೀಯ ಕೊರತೆ.

2019ರ ಸಾಲಿನ ಆರ್ಥಿಕ ಸಮೀಕ್ಷೆಯು 2024ರೊಳಗೆ ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸುವ ದೂರದೃಷ್ಚಿಗೆ ರೂಪುರೇಷೆಯನ್ನು ಹಾಕಿಕೊಟ್ಟಿದೆ. ಸಾಮಾಜಿಕ ವಲಯ ತಂತ್ರಜ್ಞಾನದ ಆಳವಡಿಕೆ ಹಾಗೂ ಇಂಧನ ಭದ್ರತೆಯಲ್ಲಿ ಆದ ಪ್ರಗತಿಯನ್ನು ವರದಿ ಪ್ರತಿಬಿಂಬಿಸಿದೆ.

ನರೇಂದ್ರ ಮೋದಿ, ಪ್ರಧಾನಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X