ವಿದೇಶಿ ನೆಲದಲ್ಲಿ ಕರಾವಳಿಯ ಯಕ್ಷರ ಅಭಿನಯ

ಮಂಗಳೂರು, ಜು.4: ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಮೇರಿಕಾ ಘಟಕವು ಅಮೇರಿಕಾದ ನ್ಯೂಜೆರ್ಸಿಯಲ್ಲಿ ಜೂ.29ರಂದು ಶುಭಾರಂಭಗೊಂಡಿದ್ದು, ಈ ಸಂದರ್ಭ ಕರಾವಳಿಯ ಯಕ್ಷಗಾನ ಕಲಾವಿದರಿಂದ ಎರಡು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.
ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನ ಸಭಾಂಗಣದಲ್ಲಿ ‘ಶ್ರೀಕೃಷ್ಣ ಲೀಲೆ-ಕಂಸ ವಧೆ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಜರುಗಿತು. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಹಾಗೂ ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್ ಮತ್ತು ಪದ್ಮನಾಭ ಉಪಾಧ್ಯಾಯ ಭಾಗವಹಿಸಿದ್ದರು.
ಪ್ರೊ.ಎಂ.ಎಲ್. ಸಾಮಗ, ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ, ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಪೂವಪ್ಪ ಶೆಟ್ಟಿ ಅಳಿಕೆ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮಹೇಶ್ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ಸುಮಂತ್ ಭಟ್ ಮತ್ತು ಸ್ಫೂರ್ತಿ ಪೂಂಜ ಪಾತ್ರ ವಹಿಸಿದ್ದರು.
ಪುತ್ತಿಗೆ ಶ್ರೀ ಕೃಷ್ಣ ವೃಂದಾವನದ ಸಿಇಒ ಯೋಗೇಂದ್ರ ಭಟ್ ಕಲಾವಿದರನ್ನು ಪರಿಚಯಿಸಿ ಗೌರವಿಸಿದರು. ಪಟ್ಲ ಫೌಂಡೇಶನ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಶ್ರೀಧರ ಆಳ್ವ ವಂದಿಸಿದರು.





