Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಂಧಕಾರ ತೊಲಗಿಸುವುದನ್ನೇ...

ಅಂಧಕಾರ ತೊಲಗಿಸುವುದನ್ನೇ ವೃತ್ತಿಯನ್ನಾಗಿಸಿದ ಅಂಧ ಶಿಕ್ಷಕಿ ಹರ್ಷಿಯಾ

ಶೇ.75 ಅಂಧತ್ವ ಹೊಂದಿರುವ ಶಿಕ್ಷಕಿ!

ಅಕ್ಬರ್‌ಅಲಿ, ಕಾವಳಕಟ್ಟೆಅಕ್ಬರ್‌ಅಲಿ, ಕಾವಳಕಟ್ಟೆ5 July 2019 12:21 PM IST
share
ಅಂಧಕಾರ ತೊಲಗಿಸುವುದನ್ನೇ ವೃತ್ತಿಯನ್ನಾಗಿಸಿದ ಅಂಧ ಶಿಕ್ಷಕಿ ಹರ್ಷಿಯಾ

ಬಂಗಾರಪೇಟೆ, ಜು.5: ಇಚ್ಛಾ ಶಕ್ತಿ, ಬೆಂಬಿಡದ ಪ್ರಯತ್ನವಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಸಕಾರಾತ್ಮಕ ಯೋಚನೆ ಜೊತೆಗಿದ್ದರೆ ಗುರಿ ತಲುಪಲು ಅಂಗವೈಕಲ್ಯ ಸಮಸ್ಯೆಯೇ ಅಲ್ಲ ಎಂಬುದಕ್ಕೆ ಅಂಧ ಶಿಕ್ಷಕಿ ಹರ್ಷಿಯಾ ಬಾನು ಸಾಕ್ಷಿಯಾಗಿದ್ದಾರೆ.

ಸುಮಾರು 32 ವರ್ಷ ಪ್ರಾಯದ ಹರ್ಷಿಯಾ ಬಾಲ್ಯದಿಂದಲೇ ಶೇ.75ರಷ್ಟು ಅಂಧತ್ವ ಹೊಂದಿದ್ದು, ಸದ್ಯ ಬಂಗಾರಪೇಟೆಯ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅರಸೀಕೆರೆ ಕರೀಮ್ ಸಾಬ್ ಮತ್ತು ರಿಹಾನಾ ಬಾನು ದಂಪತಿಯ ಹಿರಿಯ ಪುತ್ರಿ ಹರ್ಷಿಯಾ ಬಡತನದಿಂದ ಬೆಳೆದು, ಸಾಮಾನ್ಯ ಶಾಲಾ ಕಾಲೇಜುಗಳಲ್ಲೇ ಶಿಕ್ಷಣ ಪೂರೈಸಿದ್ದಾರೆ. ಬಾಲ್ಯದ ಸಂಕಷ್ಟದ ದಿನಗಳನ್ನು ಎದುರಿಸುವಾಗ ತಾನು ಏನಾದರೂ ಸಾಧಿಸಬೇಕು. ಮನೆಯವರಿಗೆ ನೆರವಾಗಬೇಕೆಂದು ಹುಟ್ಟಿದ ಛಲವೇ ಹರ್ಷಿಯಾ ಬಾನು ಸೃಜನಶೀಲ ಪ್ರೌಢಶಾಲಾ ಶಿಕ್ಷಕಿಯಾಗಲು ಸಾಧ್ಯವಾಯಿತು.

ಅಂಧ ಮಕ್ಕಳ ಶಾಲೆಗೆ ಸೇರಿಸಲು ಸಲಹೆ: ಹರ್ಷಿಯಾ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ್ದು, ಮಂದ ದೃಷ್ಟಿಯ ಕಾರಣ ಕಪ್ಪುಹಲಗೆಯ ಅಕ್ಷರಗಳು ಹರ್ಷಿಯಾಗೆ ಕಾಣುತ್ತಿರಲಿಲ್ಲ. ಆ ಕಾರಣಕ್ಕಾಗಿ ಶಿಕ್ಷಕರು ಆಕೆಯನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಲು ಪೋಷಕರಿಗೆ ಸಲಹೆ ನೀಡುತ್ತಾರೆ. ಶಿಕ್ಷಕರ ಸಲಹೆಯನ್ನು ನಿರಾಕರಿಸಿದ ಹರ್ಷಿಯಾ ತಾಯಿ ‘‘ಮಗಳು ನಮ್ಮ ಕಣ್ಣ ಮುಂದೆ ಬೆಳೆಯಬೇಕು. ಕಷ್ಟವೋ ಸುಖವೋ ಮಗಳು ಜೊತೆಯಲ್ಲೇ ಇರಲಿ’’ ಎಂದು ಹೇಳಿ ಕಲಿಕೆ ಮುಂದುವರಿಸುವಂತೆ ಕೋರುತ್ತಾರೆ.

ಕುರುಡಿ ಎಂದು ಹೀಯಾಳಿಕೆ: ದೂರದೃಷ್ಟಿಯ ಸಮಸ್ಯೆ ಇರುವ ಶಿಕ್ಷಕಿ ಹರ್ಷಿಯಾಗೆ ಸಮೀಪದಿಂದಲೇ ಓದಬೇಕು. ಕಣ್ಣಗುಡ್ಡೆ ಅಲುಗಾಡುವುದರಿಂದ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿಲ್ಲ. ಕನ್ನಡಕ ಬಳಕೆಯೂ ಅವರಿಗೆ ಸಹಕಾರಿಯಾಗುವುದಿಲ್ಲ. ಶಿಕ್ಷಕರ ಅನುಕಂಪ ಪ್ರೋತ್ಸಾಹ ಸದಾ ಇರುತ್ತಿತ್ತು. ಆದಾಗ್ಯೂ ಸಹಪಾಠಿಗಳು ಆಟದ ಮೈದಾನದಲ್ಲಿ ಕುರುಡಿ ಎಂದು ಚೇಡಿಸುತ್ತಿದ್ದರು. ಹರ್ಷಿಯಾ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೌನವಾಗುತ್ತಿದ್ದರು.

ಹಿರಿಯ ವಿದ್ಯಾರ್ಥಿಗಳ ಸಹಕಾರ: ಸಾಮಾನ್ಯವಾಗಿ ಶಿಕ್ಷಕರು ಪಾಠಗಳನ್ನು ವಿದ್ಯಾರ್ಥಿಗಳಲ್ಲಿ ಓದಿಸುತ್ತಾರೆ. ಹಾಗೇ ಸರತಿ ಸಾಲಲ್ಲಿ ಓದಿಸುವಾಗ ಹರ್ಷಿಯಾ ಸರದಿ ಬಂದಾಗ ಶಿಕ್ಷಕರು ಆಕೆಯ ಮೇಲೆ ಅನುಕಂಪದೊಂದಿಗೆ ‘‘ಬೇಡಮ್ಮ ನಿನಗೆ ಓದಲು ಕಷ್ಟವಾಗುತ್ತೆ’’ ಎಂದು ಹೇಳುತ್ತಿದ್ದರು. ನಂತರದ ದಿನಗಳಲ್ಲಿ ಆಕೆ ಹಿರಿಯ ವಿದ್ಯಾರ್ಥಿಗಳಲ್ಲಿ ಪಾಠಗಳನ್ನು ಹೇಳಿಸಿಕೊಂಡು ಕಲಿಯತೊಡಗುತ್ತಾರೆ. ಶಿಕ್ಷಕರು ಕೂರಲು ಹೇಳಿದಾಗ ‘‘ಸರ್ ನಾನು ಓದುತ್ತೇನೆ ಅವಕಾಶ ಕೊಡಿ’’ ಎಂದು ಹೇಳಿದ ಹರ್ಷಿಯಾ ಅಂದಿನಿಂದ ‘‘ಅನುಕಂಪ ಬೇಡ ಅವಕಾಶ ಇರಲಿ’’ ಎಂಬ ಘೋಷಣೆ ಮೈಗೂಡಿಸಿಕೊಳ್ಳುತ್ತಾರೆ.

ಗಣಿತ ಲೆಕ್ಕಗಳು ಕಪ್ಪು ಹಲಗೆಯಲ್ಲಿ ಕಾಣದ ಕಾರಣ 7ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಹರ್ಷಿಯಾ ನಂತರ ಸತತ ಅಭ್ಯಾಸದಿಂದ ಉತ್ತೀರ್ಣಗೊಂಡು ಹೈಸ್ಕೂಲ್ ಶಿಕ್ಷಣದತ್ತ ಮುಂದಡಿ ಇಟ್ಟರು.

ಆಟದ ಅವಧಿಯಲ್ಲಿ ಪಾಠ: ಪ್ರೌಢ ಶಿಕ್ಷಣ ಪಡೆಯಲು ಜಿ.ಎಸ್. ಗೌರಮ್ಮ ಪ್ರೌಢ ಶಾಲೆಗೆ ಸೇರಿದ ಹರ್ಷಿಯಾ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕ, ವಿಜ್ಞಾನದ ಚಿತ್ರ, ಸಮಾಜ ವಿಜ್ಞಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದರು ಎಸೆಸೆಲ್ಸಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಗೊಳ್ಳುತ್ತಾರೆ. ಹರ್ಷಿಯಾಗೆ ಪಿಯುಸಿಯಲ್ಲಿ ವಿಜ್ಞಾನ ಕಲಿಯ ಬೇಕು ಎಂಬ ಆಸೆ ಇತ್ತು. ಆದರೆ ದೃಷ್ಟಿದೋಷ ದಿಂದಾಗಿ ವಿಜ್ಞಾನ ವಿಭಾಗ ಸೇರಲು ಸಾಧ್ಯವಾಗಲಿಲ್ಲ. ಪದವಿಯಲ್ಲಿ ಕನ್ನಡ ಸಾಹಿತ್ಯ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ಅಭ್ಯಾಸ ಮಾಡಿದ ಆಕೆ ಪದವಿಯ ಬಳಿಕ ಬಿಇಡಿಗೆ ಸೇರಿ ಶಿಕ್ಷಕರ ತರಬೇತಿ ಪೂರ್ಣಗೊಳಿಸುತ್ತಾರೆ.

ಅವಕಾಶ ಸಿಗದಿದ್ದರೂ ಸತತ ಪ್ರಯತ್ನ: ವಿಶಿಷ್ಟ ಕಲಿಕೋ ಪಕರಣಗಳನ್ನು ಬಳಸಿ ಪಾಠ ಮಾಡುವು ದನ್ನು ಅಭ್ಯಾಸ ಮಾಡಿಕೊಂಡ ಹರ್ಷಿಯಾಗೆ, ಶಿಕ್ಷಣ ಮುಗಿದ ಬಳಿಕ ಯಾವುದೇ ಖಾಸಗಿ ಶಾಲೆಯವರು ಅವಕಾಶ ನೀಡಲಿಲ್ಲ. ನಂತರ ಅರಸೀಕೆರೆಯ ಟ್ಯುಟೋರಿಯಲ್ ಒಂದರಲ್ಲಿ ಕೆಲಸ ಮಾಡುತ್ತಾ, ಸರಕಾರಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಿದರು. ಸಿಇಟಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.

ಶಿಕ್ಷಕಿಯಾದ ಹರ್ಷಿಯಾ!: ಶಿಕ್ಷಕಿ ಹರ್ಷಿ ಯಾಗೆ ಪುಸ್ತಕದ ಅಕ್ಷರಗಳು ಸರಿಯಾಗಿ ಕಾಣದ ಕಾರಣ ಮನೆಯಲ್ಲಿ ಪಾಠವನ್ನು ಬಾಯಿಪಾಠ ಮಾಡಿ ತರಗತಿಗೆ ಹಾಜರಾಗುತ್ತಾರೆ. ಪಾಠ ಎಲ್ಲಿಗೆ ನಿಲ್ಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ನೆನಪಿಟ್ಟು ಪಾಠ ಮಾಡುತ್ತಿದ್ದ ಆಕೆ, ಕನ್ನಡ ವ್ಯಾಕರಣವನ್ನು ಚಾರ್ಟ್ ಮಾಡಿ ಬೋಧಿಸುವ ಪ್ರಯೋಗ ಮಾಡುತ್ತಾರೆ. ಇದು ಆಕರ್ಷಕವಾಗಿದ್ದು, ವಿದ್ಯಾರ್ಥಿಗಳ ಕಲಿಕೆಗೂ ಸಹಕಾರಿಯಾಗಿದೆ.

ಶಿಕ್ಷಕಿ ಹರ್ಷಿಯಾರ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಿಸಿದ ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿದ್ದು, ಕನ್ನಡ ಪಠ್ಯೇತರ ವಿಷಯಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅವರು ಶಿಕ್ಷಕಿಯಾದ ಮೇಲೆ 5 ವರ್ಷಗಳ ಎಸೆಸೆಲ್ಸಿ ಪರೀಕ್ಷೆಯಲ್ಲಿ 3 ಬ್ಯಾಚ್ ಶೇ.100 ಫಲಿತಾಂಶ ಪಡೆದಿದ್ದು, 2016-17ರ ಸಾಲಿನಲ್ಲಿ 3 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಹರ್ಷಿಯಾ ಸಮರ್ಥ ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲೂ ತನ್ನ ಪಾತ್ರವನ್ನು ನಿಭಾಯಿಸಿದ್ದಾರೆ.

ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗದು. ಅಂಗವಿಕಲರು ಅನುಕಂಪ ಬಯಸಬಾರದು. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸಬೇಕು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆ ಕ್ರಿಯಾಶೀಲತೆ ಬೆಳೆಯುತ್ತದೆ.

ಹರ್ಷಿಯಾ ಬಾನು,

► ಪ್ರಶಸ್ತಿಗಳು

  • ಉಲ್ಲಾಸ್ ನೆನಪಿನ ಕಾವ್ಯ ಪುರಸ್ಕಾರ
  • ಕುವೆಂಪು ನೆನಪಿನ ಕಾವ್ಯ ಪುರಸ್ಕಾರ
  • ಡಿ.ವಿ. ವತ್ಸಲಾ ದೇವಿ ದತ್ತಿನಿಧಿ ಪುರಸ್ಕಾರ
  • ಆದರ್ಶ ಅಧ್ಯಾಪಕಿ ಪುರಸ್ಕಾರ
  • ಹೊಸ ಚಿಗುರು ಪ್ರಶಸ್ತಿ
  • ಕನ್ನಡ ಸೇವಾರತ್ನ ಪ್ರಶಸ್ತಿ
  • ಆವಂತಿಕಾ ಡಾ.ಎಪಿಜೆ ಅಬ್ದುಲ್ ಕಲಾಂ ಅವಾರ್ಡ್
  • ಕರುನಾಡ ಚೇತನ ಪ್ರಶಸ್ತಿ
  • ಚಂದ್ರಶೇಕರ್ ಧೂಳೇಕರ್ ಸಾಹಿತ್ಯ ಪ್ರಶಸ್ತಿ
  • ಇನ್ನೂ ಹಲವು ಪ್ರಶಸ್ತಿಗಳು ಶಿಕ್ಷಕಿ ಹರ್ಷಿಯಾ ಮಡಿಲು ಸೇರಿವೆ.

share
ಅಕ್ಬರ್‌ಅಲಿ, ಕಾವಳಕಟ್ಟೆ
ಅಕ್ಬರ್‌ಅಲಿ, ಕಾವಳಕಟ್ಟೆ
Next Story
X