ಸಚಿನ್ ತೆಂಡುಲ್ಕರ್‌ರ 27ವರ್ಷಗಳ ಹಳೆಯ ದಾಖಲೆ ಮುರಿದ ಅಫ್ಘಾನಿಸ್ತಾನದ ಆಟಗಾರ

ಹೆಡ್ಡಿಂಗ್ಸ್, ಜು.5: ಅಫ್ಘಾನ್‌ನ ಯುವ ಆಟಗಾರ ಇಕ್ರಂ ಅಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿರ್ಮಿಸಿದ್ದ ಹಳೆಯ ದಾಖಲೆಯೊಂದನ್ನು ಮುರಿದು ವಿಶ್ವದ ಗಮನ ಸೆಳೆದರು.
ಗುರುವಾರ ಹೆಡ್ಡಿಂಗ್‌ನಲ್ಲಿ 18ರ ಹರೆಯದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಕ್ರಂ ವಿಂಡೀಸ್ ವಿರುದ್ಧ ಐಸಿಸಿ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ 92 ಎಸೆತಗಳಲ್ಲಿ 86 ರನ್ ಗಳಿಸಿದರು. ಈ ಮೂಲಕ 27 ವರ್ಷಗಳ ಹಿಂದೆ 1992ರ ವಿಶ್ವಕಪ್‌ನಲ್ಲಿ ತೆಂಡುಲ್ಕರ್ ನ್ಯೂಝಿಲ್ಯಾಂಡ್ ವಿರುದ್ಧ ತನ್ನ 18ರ ವಯಸ್ಸಿನಲ್ಲಿ ಗಳಿಸಿದ್ದ 84 ರನ್ ದಾಖಲೆಯನ್ನು ಮುರಿದರು.
‘‘ತೆಂಡುಲ್ಕರ್‌ರಂತಹ ದಂತಕತೆಯ ದಾಖಲೆ ಮುರಿದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ಸಾಧನೆ ನನಗೆ ತುಂಬಾ ಖುಷಿಕೊಟ್ಟಿದೆ ಎಂದು ಇಕ್ರಂ ಹೇಳಿದ್ದಾರೆ.
Next Story





