ಕಾಸರಗೋಡು : ಕೆರೆಯಲ್ಲಿ ಮುಳುಗಿ ಧಾರವಾಡ ಮೂಲದ ಯುವಕ ಮೃತ್ಯು

ಕಾಸರಗೋಡು : ಕೆರೆಯಲ್ಲಿ ಮುಳುಗಿ ಧಾರವಾಡ ಮೂಲದ ಯುವಕನೋರ್ವ ಮೃತಪಟ್ಟ ಘಟನೆ ಕುಂಡಂಗುಯಿಯಲ್ಲಿ ನಡೆದಿದೆ.
ಮೃತರನ್ನು ಧಾರವಾಡದ ಮಹಾಂತೇಶ್ (18) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಕುಂಡಂಗುಯಿಯ ಕೆರೆಯಲ್ಲಿ ಸ್ನಾನಕ್ಕಿಳಿದಿದ್ದು, ನೀರಲ್ಲಿ ಮುಳುಗಿದ್ದರು . ಜೊತೆಯಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದ್ದು, ಕೊನೆಗೆ ಅಗ್ನಿಶಾಮಕ ದಳ ಮತ್ತು ಸ್ಥಳೀಯರ ನೆರವಿನಿಂದ ಮೃತದೇಹವನ್ನು ಹೊರತೆಗೆಯಲಾಯಿತು.
ಕೆಲ ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕಾಸರಗೋಡಿಗೆ ತಲಪಿದ್ದ ಮಹಾಂತೇಶ್ ಕಾಸರಗೋಡು ಅಶೋಕ ನಗರದ ಬಾಡಿಗೆ ರೂಂ ನಲ್ಲಿ ವಾಸವಾಗಿದ್ದರು . ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು , ಮನೆಯವರಿಗೆ ಮಾಹಿತಿ ನೀಡಲಾಗಿದೆ .
ಸಂಬಂಧಿಕರು ತಲಪಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಬಿಟ್ಟುಕೊಡಲಿದೆ
Next Story





