ಇದು ಅವರ ಅಪ್ಪನ ಆಸ್ತಿಯಲ್ಲ: ಬಿಜೆಪಿ ವಕ್ತಾರ ರಮೇಶ್ ವಿರುದ್ಧ ಝಮೀರ್ ಅಹ್ಮದ್ ವಾಗ್ದಾಳಿ

ಬೆಂಗಳೂರು, ಜು.5: ನಿವೇಶನ ಕಡಿಮೆ ಬೆಲೆಗೆ ಮಾರಾಟ ಮಾಡಲು ಅದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅಪ್ಪನ ಆಸ್ತಿಯಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.
ಶುಕ್ರವಾರ ಈ.ಡಿ. ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಸಂಸ್ಥೆಗೆ ಕಡಿಮೆ ಬೆಲೆಗೆ ಆಸ್ತಿ ಮಾರಾಟ ಮಾಡಿದ್ದೇನೆಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಆದರೆ, ಇದು ಅವರ ಅಪ್ಪನ ಆಸ್ತಿಯಲ್ಲ. ಅವರಿಗೂ ನನ್ನ ಸ್ವಂತ ಆಸ್ತಿಗೂ ಸಂಬಂಧವೇನು ಎಂದು ಪ್ರಶ್ನೆ ಮಾಡಿದರು.
ಈ.ಡಿ. ಅವರು 2018ರಲ್ಲಿ ನಿವೇಶನ ಮಾರಾಟ ಮಾಡಿದ ಬಗ್ಗೆ ದಾಖಲೆ ಕೇಳಿದ್ದು, ಒದಗಿಸಿದ್ದೇನೆ. ಅದೇ ರೀತಿ, ಈ.ಡಿ. ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅವರ ವಿಚಾರಣೆ ಮುಗಿದಿದ್ದು, ಮತ್ತೊಮ್ಮೆ ಹೋಗುವಂತಿಲ್ಲ ಎಂದ ಝಮೀರ್ ಹೇಳಿದರು.
Next Story





