ಕಾಪು ತಹಶೀಲ್ದಾರ್ ಆಗಿ ಮುಹಮ್ಮದ್ ಇಸಾಕ್
ಉಡುಪಿ, ಜು.5: ಕಾಪು ತಾಲೂಕಿನ ನೂತನ ತಹಶೀಲ್ದಾರ್ ಆಗಿ ಮುಹಮ್ಮದ್ ಇಸಾಕ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇಲ್ಲಿ ತಹಶೀಲ್ದಾರ್ ಆಗಿದ್ದ ಸಂತೋಷ್ ಕುಮಾರ್ ಅವರು ಅರಸಿಕೆರೆಗೆ ವರ್ಗವಾಗಿದ್ದಾರೆ. ಮುಹಮ್ಮದ್ ಇಸಾಕ್ ಈವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಾಸನ ಜಿಲ್ಲಾಧಿಕಾರಿ ಕಚೇರಿ, ಮೂಡಬಿದ್ರೆ, ಕಾರ್ಕಳ ಮತ್ತಿತ್ತರ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Next Story





