ನಗರಸಭೆ: ಎಸ್ಸಿ-ಎಸ್ಟಿ, ಬಡವರು, ವಿಕಲಚೇತನರಿಂದ ಅರ್ಜಿ ಆಹ್ವಾನ
ಉಡುಪಿ, ಜು.5: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಾರ್ಷಿಕ 2.50 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಪ.ಜಾತಿ/ಪ.ಪಂಗಡದ ಕುಟುಂಬದವರಿಗೆ ಹಾಗೂ ಖಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ 2019-20 ನೇ ಸಾಲಿನಲ್ಲಿ ಶೇ.24.10ರ ನಿಧಿಯಡಿ ಸೌಲಭ್ಯಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಬಡ ಕುಟುಂಬ: ಉಡುಪಿ ನಗರಸಭಾ ವ್ಯಾಪ್ತಿಯ ವಾರ್ಷಿಕ 2.50 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಇತರೆ ಬಡ ವರ್ಗದ ಕುಟುಂಬದ ಸದಸ್ಯರಿಗೆ 2019-20ನೇ ಸಾಲಿನಲ್ಲಿ ಶೇ.7.25ರ ನಿಧಿಯಡಿ ಸೌಲ್ಯಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆ, ವಿದ್ಯಾರ್ಥಿ ವೇತನ(ಎಸೆಸೆಲ್ಸಿ, ಐಟಿಐ, ದ್ವಿತೀಯ ಪಿಯುಸಿ/ಡಿಪ್ಲೊಮಾ/ ಪ್ಯಾರಾ ಮೆಡಿಕಲ್ ಪೂರ್ಣಗೊಳಿ ಸರಬೇಕು. ಬಿ.ಎ., ಬಿ.ಕಾಂ, ಬಿಎಸ್‌ಸಿ (2ನೇ ಮತ್ತು 3 ನೇ ವರ್ಷದ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ), ಮಾಸ್ಟರ್ ಡಿಗ್ರಿ, ಎಂಎ, ಎಂಕಾಂ, ಎಂಎಸ್‌ಸಿ, ಬಿಇ ವಿದ್ಯಾರ್ಥಿಗಳಿಗೆ), ಅನಿಲ ಸಂಪರ್ಕ, ಸಣ್ಣ ಉದ್ದಿಮೆ, ಮನೆ ದುರಸ್ಥಿ ಸೌಲಭ್ಯಗಳು ದೊರೆಯಲಿವೆ.
ವಿಕಲಚೇತನರು: ಉಡುಪಿ ನಗರಸಭಾ ವ್ಯಾಪ್ತಿಯ ವಾರ್ಷಿಕ 2.50 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ವಿಕಲಚೇತನ ಫಲಾನುಭವಿಗಳಿಗೆ 2019-20ನೆ ಸಾಲಿನಲ್ಲಿ ಶೇ.5ರ ನಿಧಿಯಡಿ ಸೌಲ್ಯಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆ, ವಿದ್ಯಾರ್ಥಿ ವೇತನ(ಎಸೆಸೆಲ್ಸಿ, ಐಟಿಐ, ದ್ವಿತೀಯ ಪಿಯುಸಿ/ಡಿಪ್ಲೊಮಾ/ ಪ್ಯಾರಾ ಮೆಡಿಕಲ್ ಪೂರ್ಣಗೊಳಿ ಸರಬೇಕು. ಬಿ.ಎ., ಬಿ.ಕಾಂ, ಬಿಎಸ್‌ಸಿ (2ನೇ ಮತ್ತು 3 ನೇ ವರ್ಷದ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ), ಮಾಸ್ಟರ್ ಡಿಗ್ರಿ, ಎಂಎ, ಎಂಕಾಂ, ಎಂಎಸ್‌ಸಿ, ಬಿಇ ವಿದ್ಯಾರ್ಥಿಗಳಿಗೆ), ಅನಿಲ ಸಂಪರ್ಕ, ಸಣ್ಣ ಉದ್ದಿಮೆ, ಮನೆ ದುರಸ್ಥಿ, ಸಾಧನ ಸಲಕರಣೆ ಖರೀದಿ, ಪೋಷಣಾ ಭತ್ಯೆ, ಟ್ರೈಸ್ಕೂಟರ್, ಕ್ರೀಡಾ ಪ್ರೋತ್ಸಾಹಧನ ಸೌಲಭ್ಯಗಳು ದೊರೆಯಲಿವೆ.
ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಚಾಲ್ತಿ ಸಾಲಿನ), ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಅಂಕಪಟ್ಟಿಯ ದೃಢೀಕೃತ ಪ್ರತಿ (ವಿದ್ಯಾರ್ಥಿ ವೇತನಕ್ಕಾಗಿ), ವ್ಯಾಸಂಗ ಪ್ರಮಾಣ ಪತ್ರದ ಮೂಲ ಪ್ರತಿ (ವಿದ್ಯಾರ್ಥಿ ವೇತನಕ್ಕಾಗಿ), ಬ್ಯಾಂಕ್ ಪಾಸ್‌ಪುಸ್ತಕದ ಪ್ರತಿ, 01 ಭಾವಚಿತ್ರವನ್ನು ಸಲ್ಲಿಸಬೇಕು.
ಅರ್ಹ ಆಸಕ್ತ ಅರ್ಜಿದಾರರು ಈ ಮೇಲ್ಕಂಡ ದಾಖಲಾತಿಗಳೊಂದಿಗೆ ಜು.31ರೊಳಗೆ ನಗರಸಬೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ಉಡುಪಿ ನಗರಸಭೆ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







