ಸಿಬಿಐನಿಂದ ನಾಗೇಶ್ವರ ರಾವ್ ಎತ್ತಂಗಡಿ

ಹೊಸದಿಲ್ಲಿ, ಜು.5: ಸಿಬಿಐನ ಹೆಚ್ಚುವರಿ ನಿರ್ದೇಶಕ ಹುದ್ದೆಯಿಂದ ಎಂ. ನಾಗೇಶ್ವರ ರಾವ್ ಅವರನ್ನು ಕೇಂದ್ರ ಸರಕಾರವು ತೆರವುಗೊಳಿಸಿದೆ ಹಾಗೂ ಅವರನ್ನು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣೆ ಹಾಗೂ ಗೃಹರಕ್ಷಕ ದಳದ ಮಹಾನಿರ್ದೇಶಕರಾಗಿ ನೇಮಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿಗಳ ಸಮಿತಿಯು ನಾಗೇಶ್ವರ್ ರಾವ್ ಅವರ ಹುದ್ದೆಯನ್ನು ಬದಲಾಯಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಸಿಬಿಐನ ನಿರ್ದೇಶಕ ಸ್ಥಾನದಿಂದ ಅಲೋಕ್ ಕುಮಾರ್ ವರ್ಮಾ ಅವರನ್ನು ಉಚ್ಚಾಟಿಸಿ, ಅವರ ಸ್ಥಾನದಲ್ಲಿ ಮಧ್ಯಂತರ ಸಿಬಿಐ ನಿರ್ದೇಶಕರಾಗಿ ನಾಗೇಶ್ವರ ರಾವ್ ಅವರನ್ನು ನೇಮಿಸಿತ್ತು. ಆದಾಗ್ಯೂ ಸುಪ್ರೀಂಕೋರ್ಟ್ ಜನವರಿಯಲ್ಲಿ ನೀಡಿದ ಆದೇಶದಲ್ಲಿ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮರುನೇಮಕಗೊಳಿಸಿತ್ತು. ಅದೇ ತಿಂಗಳ ಕೊನೆಯಲ್ಲಿ ಕೇಂದ್ರ ಸರಕಾರ ಮತ್ತೆ ವರ್ಮಾ ಅವರನ್ನು ಉಚ್ಚಾಟಿಸಿತ್ತು.
ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ ರಾವ್ ಅವರು 2019ರ ಫೆಬ್ರವರಿ 1ರವರೆಗೆ ಸೇವೆ ಸಲ್ಲಿಸಿದ್ದರು. ಆನಂತರ ಅವರನ್ನು ಕೇಂದ್ರ ಸರಕಾರವು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಿತ್ತು. ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ ರಾವ್ ಅವರ ನೇಮಕವನ್ನು ಪ್ರಶ್ನಿಸಿ ಎನ್‌ಜಿಓ ಸಂಸ್ಥೆ ‘ಕಾಮನ್ ಕಾಸ್’ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಜ್ ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ





