ನಿಯಾಝ್ ಅಹಮದ್ ರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಮಂಗಳೂರು: ಸಮಾಜ ಸೇವಕ ನಿಯಾಝ್ ಸಾಮಣಿಗೆ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು , ಜಿಲ್ಲಾ ಘಟಕ ಹಾಸನ ಹಾಗೂ ತಾಲೂಕು ಘಟಕ ಸಕಲೇಶಪುರ ಇವರ ಸಂಯುಕ್ತಾಶ್ರಯದಲ್ಲಿ ಸಕಲೇಶಪುರ ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿ ಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಕವಿ- ಕಾವ್ಯ ಸಮ್ಮೇಳನದಲ್ಲಿ" ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಂಗಳೂರಿನ ಕೋಣಾಜೆ ಗ್ರಾಮದ ಆಸೈಗೊಳಿ ಸಾಮಾಣಿಗೆಯ ಟಿ.ಎಸ್. ಅಬ್ದುಲ್ಲಾರವರ ಪುತ್ರ ನಿಯಾಝ್ ಸಾಮಾಣಿಗೆ ಸಾಮಾಜಿಕ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ನೂರಾರು ಸಮಾಜ ಮುಖ ಕಾರ್ಯಗಳನ್ನು ಮಾಡುತ್ತಾ ಕನ್ನಡ ನಾಡು ನುಡಿಗಾಗಿ ಸಮಾಜದ ಹಿತಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ . ಜಾತ್ಯಾತೀತ ಮನೋಭಾವದ ಹಲವು ಯುವಕರನ್ನು ಸೇರಿಸಿಕೊಂಡು ಸೋಶಿಯಲ್ ಅಚೀವ್ ಮೆಂಟ್ ಫೋರಂ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಈ ಸಂಸ್ಥೆಯ ಮುಖಾಂತರ ಸಮಾಜದ ಎಲ್ಲಾ ರಂಗಗಳಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ನಡೆಸುತ್ತಾ ಸಮಾಜದ ಕೆಳಸ್ತರದಲ್ಲಿ ಬದುಕುತ್ತಿರುವ ಅಸಹಾಯಕರಿಗೆ ಮತ್ತು ನೊಂದವರಿಗೆ ಸಹಾಯ ಮಾಡಿದ್ದಾರೆ.
ಇವರ ಸಂಪಾದಕತ್ವದಲ್ಲಿ "ಶಾಂತಿ ,ಸಹೋದರತೆ ಸಹಬಾಳ್ವೆ ಎಂಬ ಪುಸ್ತಕವು ಪ್ರಕಟಗೊಂಡಿದ್ದು ಪ್ರಾದೇಶಿಕ ಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು ಪ್ರಕಟವಾಗಿದೆ. "ಕರ್ನಾಟಕ ಜಾನಪದ ಪ್ರಶಸ್ತಿ, ಕೇರಳ ಗಡಿನಾಡ ಘಟಕ ಪ್ರಶಸ್ತಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರಶಸ್ತಿ , ಲಯನ್ಸ್ ಅವಾರ್ಡ್ ,ಇನ್ನಿತರ ಹಲವು ಪ್ರಶಸ್ತಿಗಳು ಇವರನ್ನು ಹರಸಿ ಕೊಂಡು ಬಂದಿವೆ.





