ಸಾಹಿತಿ ಗೀತಾ ಎಸ್. ಭಟ್ಟ ಇವರ ಸಾಹಿತ್ಯ ಕೃಷಿಗೆ ಪ್ರಶಸ್ತಿ
ಭಟ್ಕಳ: ತಾಲೂಕಿನ ಬೇಂಗ್ರೆ ನಿವಾಸಿಯಾದ ಸಾಹಿತಿ ಗೀತಾ ಎಸ್. ಭಟ್ಟ ಇವರ ಸಾಹಿತ್ಯ ಕೃಷಿಗೆ ಕಸ್ತೂರಿ ಸಿರಿಗನ್ನಡ ವೇದಿಕೆ ಸಾಹಿತ್ಯ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಬೆಳಗಾವಿಯ ಜಿಲ್ಲಾಧ್ಯಕ್ಷ ಪ್ರೊ.ಎಲ್.ಎಚ್.ಪೆಂಡಾರಿಯವರ ಸ್ವ ಗ್ರಾಮ ನಾಗರಮನೊಳ್ಳಿಯಲ್ಲಿ ಜು.7 ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರ ಮಟ್ಟದ ಗೌರವ ಸಾಹಿತ್ಯ ವಿಭೂಷಣ ಪ್ರಶಸ್ತಿಯನ್ನು ಗೀತಾ ಎಸ್. ಭಟ್ಟ ಇವರಿಗೆ ಪ್ರದಾನ ಮಾಡಲಾಗುವುದು ಎಂದೂ ತಿಳಿಸಲಾಗಿದೆ.
ನಂತರ ಸಮ್ಮೇಳನದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಕೂಡಾ ಗೀತಾ ಎಸ್. ಭಟ್ಟ ಅವರು ಕಾವ್ಯ ವಾಚನ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ. ಇವರು ರಚಿಸಿದ ಲೆಕ್ಕತಪ್ಪಿದ ಚಿತ್ರಗುಪ್ತ ಕೃತಿಗೆ ಬೆಳಕು ಸಾಹಿತ್ಯ ಸನ್ಮಾನ ಪ್ರಶಸ್ತಿ 2019ನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
Next Story





