ಉಳ್ಳಾಲ: ಕಾರು ಢಿಕ್ಕಿ ಹೊಡೆದು ಮಹಿಳೆ ಮೃತ್ಯು
ಉಳ್ಳಾಲ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಗಳೊಂದಿಗೆ ರಸ್ತೆ ದಾಟುತ್ತಿದ್ದ ಮಹಿಳೆಯೋರ್ವರು ಮೃತಪಟ್ಟು ಮಗಳು ಗಾಯಗೊಂಡ ಘಟನೆ ಅಂಬಿಕಾರೋಡಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಕೋಟೆಕಾರು ನಿವಾಸಿ ಚಾಂದ್ ಬೀಬಿ (54) ಮೃತಪಟ್ಟ ಮಹಿಳೆ.
ಚಾಂದ್ ಬೀಬಿ ಮತ್ತು ಮಗಳು ನಗೀನ (32) ಇಬ್ಬರೂ ಅಂಬಿಕಾರೋಡಿನ ಮನೆಯೊಂದರಲ್ಲಿ ಮನೆಗೆಲಸಕ್ಕಿದ್ದು, ಶುಕ್ರವಾರ ಬೆಳಗ್ಗೆ ಬಸ್ಸಿನಿಂದ ಇಳಿದು ಕೆಲಸಕ್ಕೆ ತೆರಳಲು ಅಂಬಿಕಾರೋಡಲ್ಲಿ ಹೆದ್ದಾರಿ ದಾಟುತ್ತಿದ್ದ ಸಂಧರ್ಭ ತಲಪಾಡಿಯಿಂದ ಮಂಗಳೂರಿಗೆ ವೇಗದಿಂದ ಧಾವಿಸುತ್ತಿದ್ದ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಕೂಡಲೆ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚಾಂದ್ ಬೀಬಿ ಮೃತಪಟ್ಟಿದ್ದಾರೆ. ಮಗಳು ನಗೀನಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿ ಕೊಂಡಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





