ಅಶ್ಲೀಲ ವೀಡಿಯೊ ಹಂಚಿಕೆ ಪ್ರಕರಣ : ಮತ್ತೆ ಮೂವರ ವಿರುದ್ಧ ಕೇಸು ದಾಖಲು
ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ಮತ್ತೆ ಮೂವರ ವಿರುದ್ದ ಕೇಸು ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಆರೋಪಿಗಳ ಸಂಖ್ಯೆ 11ಕೇರಿದೆ.
ಪುತ್ತೂರು ತಾಲೂಕಿನ ಬೆಳಂದೂರು ನಿವಾಸಿಗಳಾದ ಶೌಕತ್ ಅಲಿ, ಜಾಬಿರ್ ಮತ್ತು ನಝೀರ್ ಎಂಬವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಂದ್ರಶೇಖರ್ ಮಯ್ಯ, ಶ್ರೇಯಾನ್ಸ್, ಪೂವಪ್ಪ, ಪವನ್ ಕುಮಾರ್, ಮೋಹಿತ್, ಧ್ಯಾನ್ ಎನ್, ಅಧ್ವಿತ್ ಕುಮಾರ್ ನಾಯ್ಕ್ ಮತ್ತು ಮುರಳೀಧರ ಎಂಬವರ ವಿರುದ್ಧ ಕೇಸು ದಾಖಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
Next Story





