ಸಚಿನ್ ಬಳಿಕ ಸತತ 7 ಅರ್ಧ ಶತಕ ಸಿಡಿಸಿದ ಶಾಕಿಬ್
ಲಂಡನ್,ಜು.5: ವಿಶ್ವದ ಶ್ರೇಷ್ಠ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ವಿಶ್ವಕಪ್ನಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿ ಸತತ 7ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು. ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದರು. ಭಾರತದ ಲೆಜೆಂಡ್ ಸಚಿನ್ ತೆಂಡುಲ್ಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡರು.
ಸಚಿನ್ 2003ರ ವಿಶ್ವಕಪ್ನಲ್ಲಿ 7 ಅರ್ಧ ಶತಕಗಳ ಸಹಿತ 11 ಪಂಧ್ಯಗಳಲ್ಲಿ 673 ರನ್ ಗಳಿಸಿದ್ದರು. ಶಾಕಿಬ್ ಪಾಕ್ ವಿರುದ್ಧ 62 ಎಸೆತಗಳಲ್ಲಿ 50ರನ್ ಗಳಿಸಿದರು, ಟೂರ್ನಿಯಲ್ಲಿ 66, 51, 41, ಔಟಾಗದೆ 124, 121, 64, ಹಾಗೂ 75ರನ್ ಗಳಿಸಿದರು.
Next Story