ಇತ್ತೀಚಿಗೆ ವಜಾಗೊಂಡ ಆದಾಯ ತೆರಿಗೆ ಆಯುಕ್ತರ ನಿವಾಸ, ಕಚೇರಿಗೆ ಸಿಬಿಐ ದಾಳಿ

ಹೊಸದಿಲ್ಲಿ,ಜು.6: ಇತ್ತೀಚಿಗೆ ಸೇವೆಯಿಂದ ವಜಾಗೊಂಡಿರುವ ಆದಾಯ ತೆರಿಗೆ ಆಯುಕ್ತ ಎಸ್.ಕೆ.ಶ್ರೀವಾಸ್ತವ ಅವರ ನೊಯ್ಡದಲ್ಲಿಯ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ವಂಚನೆ,ಫೋರ್ಜರಿ ಮತ್ತು ಲಂಚ ಸ್ವೀಕಾರ ಆರೋಪಗಳಲ್ಲಿ ಶ್ರೀವಾಸ್ತವ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು.
ಸರಕಾರವು ಇತ್ತೀಚಿಗೆ ಕಡ್ಡಾಯವಾಗಿ ನಿವೃತ್ತಿಗೊಳಿಸಿದ ಹಲವಾರು ಆದಾಯ ತೆರಿಗೆ ಅಧಿಕಾರಿಗಳಲ್ಲಿ ಶ್ರೀವಾಸ್ತವ ಕೂಡ ಸೇರಿದ್ದಾರೆ.
Next Story





