ಸೆಮಿಫೆನಲ್ ಪ್ರವೇಶಿಸಿದ ಕಶ್ಯಪ್
ಕೆನಡಾ ಓಪನ್
ಗ್ಯಾಲ್ಗೇರಿ, ಜು.6: ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಅವರು ಇನ್ನೊಮ್ಮೆ ಉತ್ತಮ ಪ್ರದರ್ಶನ ನೀಡುವ ಮೂಲಕ ಯುಎಸ್ಡಿ 75,000 ಕೆನಡಾ ಓಪನ್ ಸೂಪರ್ 100 ಟೂರ್ನಮೆಂಟ್ನ ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
6ನೇ ಶ್ರೇಯಾಂಕದ ಕಶ್ಯಪ್ ಅವರು ಕ್ವಾರ್ಟರ್ ಫೈನಲ್ನ ಪುರುಷರ ಸಿಂಗಲ್ಸ್ನಲ್ಲಿ ಫ್ರಾನ್ಸ್ನ ಲೂಕಸ್ ಕ್ಲಾರ್ಬೌಟ್ ವಿರುದ್ಧ 12-21, 23-21, 24-22 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ನಲ್ಲಿ ಅವಕಾಶ ದೃಢಪಡಿಸಿದರು.
ಲೂಕಸ್ ಅವರ ಸವಾಲನ್ನು 1ಗಂಟೆ ಮತ್ತು 16 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿ ಕಶ್ಯಪ್ ಗೆಲುವಿನ ನಗೆ ಬೀರಿದರು.
ಸೆಮಿಫೈನಲ್ನಲ್ಲಿ ಕಶ್ಯಪ್ ಅವರು ನಾಲ್ಕನೇ ಶ್ರೇಯಾಂಕದ ಚೀನಾ ತೈಪೆಯ ವಾಂಗ್ ಝು ವೆಯ್ ಅವರನ್ನು ಎದುರಿಸಲಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಅವರು ಚೀನಾದ ಲೀ ಶಿ ಫೆಂಗ್ ವಿರುದ್ಧ ಆಡಿದ ಪಂದ್ಯದಲ್ಲಿ 15-21, 11-21 ಅಂತರದಲ್ಲಿ ಸೋತು ನಿರ್ಗಮಿಸಿದರು. ಕೇವಲ 38 ನಿಮಿಷಗಳಲ್ಲಿ ಸೌರಭ್ ವರ್ಮಾ ಎದುರಾಳಿಗೆ ಶರಣಾದರು.
Next Story