ಅಮೆರಿಕ ಪ್ರವಾಸ ವೇಳೆ ರಾಯಭಾರಿ ಮನೆಯಲ್ಲಿ ತಂಗಲು ಇಮ್ರಾನ್ ಇಚ್ಛೆ
ಇಸ್ಲಾಮಾಬಾದ್, ಜು. 8: ಅಮೆರಿಕಕ್ಕೆ ತಾನು ನೀಡುವ ಮೂರು ದಿನಗಳ ಭೇಟಿಯ ವೇಳೆ, ದುಬಾರಿ ಹೊಟೇಲ್ನ ಬದಲಾಗಿ ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿಯ ಅಧಿಕೃತ ನಿವಾಸದಲ್ಲಿ ತಂಗುವ ಇಚ್ಛೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಇಮ್ರಾನ್ ಖಾನ್ ಜುಲೈ 21ರಿಂದ ಅಮೆರಿಕ ಪ್ರವಾಸ ಕೈಗೊಳ್ಳುತ್ತಾರೆ.
ಪಾಕಿಸ್ತಾನದ ರಾಯಭಾರಿ ಅಸಾದ್ ಮಜೀದ್ ಖಾನ್ರ ನಿವಾಸದಲ್ಲಿ ತಂಗಿದರೆ ಇಮ್ರಾನ್ರ ಪ್ರವಾಸ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ. ಆದರೆ, ಅಮೆರಿಕದ ಬೇಹುಗಾರಿಕೆ ಸಂಸ್ಥೆಯಾಗಲಿ, ನಗರಾಡಳಿತವಾಗಲಿ ಈ ಬಗ್ಗೆ ತೃಪ್ತಿ ಹೊಂದಿಲ್ಲ.
ಅಮೆರಿಕದ ಬೇಹುಗಾರಿಕೆ ಸಂಸ್ಥೆ ಪ್ರವಾಸಿ ಗಣ್ಯರ ಭದ್ರತೆಯ ಹೊಣೆಯನ್ನು ವಹಿಸಿದರೆ, ಪ್ರವಾಸವು ವಾಶಿಂಗ್ಟನ್ನ ವಾಹನ ಸಂಚಾರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ವಾಶಿಂಗ್ಟನ್ ನಗರಾಡಳಿತ ಹೊಂದಿದೆ.
Next Story