2 ವಿತ್ತ ವರ್ಷಗಳಲ್ಲಿ ಕೇಂದ್ರದ ಇಲಾಖೆಗಳಲ್ಲಿ 3.81 ಲಕ್ಷ ಉದ್ಯೋಗ ಸೃಷ್ಟಿ: ಕೇಂದ್ರ ಸರಕಾರ

ಹೊಸದಿಲ್ಲಿ, ಜು.8: ದೇಶದಲ್ಲಿ ಉದ್ಯೋಗಾವಕಾಶಗಳ ತೀವ್ರ ಕೊರತೆಯಿರುವ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗುತ್ತಿರುವಂತೆಯೇ, ಕಳೆದ ಎರಡು ಹಣಕಾಸು ವರ್ಷಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ 3.81 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದಾಗಿ ಕೇಂದ್ರ ಸರಕಾರವು ತಿಳಿಸಿದೆ.
2017ರ ಮಾರ್ಚ್ 1ರಂದು ಸರಕಾರಿ ಇಲಾಖೆಗಳ ಒಟ್ಟು ಉದ್ಯೋಗಿಗಳ ಸಂಖ್ಯೆ 32,38,397 ಆಗಿತ್ತು. 2019ರಲ್ಲಿ ಅದೇ ದಿನಾಂಕದಂದು ಅದು 36,19,596 ಆಗಿದ್ದು, 3,81,199ರಷ್ಟು ಏರಿಕೆಯನ್ನು ಕಂಡಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗಾಗಿ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. 2016ರಲ್ಲಿ ನಗದು ಅಮಾನ್ಯಗೊಳಿಸಿದ ಬಳಿಕ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರಕಾರವು ವಿಫಲವಾಗಿದೆಯೆಂದು ಅವು ಆರೋಪಿಸುತ್ತಿವೆ.
ಕಳೆದ ಎರಡು ಹಣಕಾಸು ವರ್ಷಗಲ್ಲಿ ಕೇಂದ್ರ ರೈಲ್ವೆ ಇಲಾಖೆಯೊಂದರಲ್ಲೇ 98,999 ಮಂದಿಯ ನೇಮಕಾತಿಯಾಗಿದೆ ಎಂದು ಬಜೆಟ್ ದಾಖಲೆಗಳು ತೋರಿಸಿಕೊಟ್ಟಿವೆ. 2017ರ ಮಾರ್ಚ್‌ನಲ್ಲಿ 12.7 ಲಕ್ಷದಷ್ಟಿದ್ದ ರೈಲ್ವೆ ಉದ್ಯೋಗಿಗಳ ಸಂಖ್ಯೆಯು 2019ರ ಮಾರ್ಚ್ 1ರಂದು 13.69 ಲಕ್ಷಕ್ಕೆ ಏರಿಕೆಯಾಗಿದೆ.
2017 ಹಾಗೂ 2019ರ ಹಣಕಾಸು ವರ್ಷಗಳಲ್ಲಿ ಸುಮಾರು 80ಸಾವಿರ ನೂತನ ಉದ್ಯೋಗಗಳು ಸೃಷ್ಟಿಯಾಗಿವೆ. ಪರೋಕ್ಷ ತೆರಿಗೆ ಇಲಾಖೆಗಳಲ್ಲಿ 53 ಸಾವಿರ ನೂತನ ಉದ್ಯೋಗಗಳು ಹಾಗೂ ನೇರ ತೆರಿಗೆ ಇಲಾಖೆಗಳಲ್ಲಿ 29,935 ಉದ್ಯೋಗಗಳು ಸೃಷ್ಯಿಟಾಗಿವೆ.
ಇದಕ್ಕೂ ಮುನ್ನ ಅದರೆ 2017ರ ಮಾರ್ಚ್1ರ ವೇಳೆಗೆ ಪರೋಕ್ಷ ಹಾಗೂ ನೇರ ತೆರಿಗೆ ಇಲಾಖೆಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕ್ರಮವಾಗಿ 53,394 ಹಾಗೂ 50,208 ಆಗಿದ್ದವು
ರಕ್ಷಣಾ ಇಲಾಖೆಯಲ್ಲಿ ಸುಮಾರು 46,347 ನೂತನ ಉದ್ಯೋಗಗಳು ಸೃಷ್ಟಿಯಾಗಿವೆ. 2017ರ ಮಾರ್ಚ್‌ನಲ್ಲಿ 42370ರಷ್ಟಿದ್ದ ಉದ್ಯೋಗಿಗಳ ಸಂಖ್ಯೆಯು 2019ರ ಮಾರ್ಚ್‌ನಲ್ಲಿ 88717ಕ್ಕೆ ಏರಿಕೆಯಾಗಿತ್ತು.
ರಕ್ಷಣಾ ಇಲಾಖೆಯಲ್ಲಿ ಸುಮಾರು 46,347 ನೂತನ ಉದ್ಯೋಗಗಳು ಸೃಷ್ಟಿಯಾಗಿವೆ. 2017ರ ಮಾರ್ಚ್‌ನಲ್ಲಿ 42370ರಷ್ಟಿದ್ದ ಉದ್ಯೋಗಿಗಳ ಸಂಖ್ಯೆಯು 2019ರ ಮಾರ್ಚ್‌ನಲ್ಲಿ 88717ಕ್ಕೆ ಏರಿಕೆಯಾಗಿತ್ತು.
ಅಣುಶಕ್ತಿ ಇಲಾಖೆಯಲ್ಲಿ ಸುಮಾರು 10 ಸಾವಿರ, ದೂರಸಂಪರ್ಕ ಇಲಾಖೆಯಲ್ಲಿ 2250, ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಇಲಾಖೆಯಲ್ಲಿ 3981 ಉದ್ಯೋಗಗಳು ಸೃಷ್ಟಿಯಾಗಿವೆ.
2017 ಹಾಗೂ 2019ರ ನಡುವೆ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಲ್ಲಿ 7743 ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಗಣಿಗಾರಿಕೆ ಸಚಿವಾಲಯದಲ್ಲಿ 6338 , ಬಾಹ್ಯಾಕಾಶ ಇಲಾಖೆಯಲ್ಲಿ 2920, ಸಿಬ್ಬಂದಿ, ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ ಸಚಿವಾಲಯದಲ್ಲಿ 2056, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ 1833 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಬಜೆಟ್ ದಾಖಲೆಗಳು ತಿಳಿಸಿವೆ







