ಇವಾಂಕಾ ಟ್ರಂಪ್ ಕ್ಷಮೆ ಕೋರುವೆ: ಬ್ರಿಟನ್ ಸಚಿವ
ಲಂಡನ್, ಜು. 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ‘ಅಸಮರ್ಥ’ ಹಾಗೂ ಶ್ವೇತಭವನವನ್ನು ‘ನಿಷ್ಕ್ರಿಯ’ ಎಂಬುದಾಗಿ ಬಣ್ಣಿಸುವ ಬ್ರಿಟನ್ ರಾಯಭಾರಿಯ ಗುಪ್ತ ಸಂದೇಶವೊಂದು ಸೋರಿಕೆಯಾಗಿರುವುದಕ್ಕಾಗಿ ನಾನು ಅಮೆರಿಕ ಅಧ್ಯಕರ ಪುತ್ರಿ ಇವಾಂಕಾರ ಕ್ಷಮೆ ಕೋರುತ್ತೇನೆ ಎಂದು ಬ್ರಿಟನ್ನ ವಾಣಿಜ್ಯ ಸಚಿವ ಲಿಯಾಮ್ ಫಾಕ್ಸ್ ಸೊಮವಾರ ಹೇಳಿದ್ದಾರೆ.
ಈ ಸಂದೇಶ ಸೋರಿಕೆಯಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ನಾನು ಅಮೆರಿಕ ಅಧ್ಯಕ್ಷರ ಪುತ್ರಿಯ ಬಳಿ ಕ್ಷಮೆ ಕೋರುತ್ತೇನೆ ಎಂದು ಅಮೆರಿಕ ಪ್ರವಾಸದಲ್ಲಿರುವ ಫಾಕ್ಸ್ ಬಿಬಿಸಿಗೆ ತಿಳಿಸಿದರು.
ತನ್ನ ಪ್ರವಾಸದ ವೇಳೆ ಸಚಿವರು ಇವಾಂಕಾ ಟ್ರಂಪ್ರನ್ನು ಭೇಟಿಯಾಗುವ ಕಾರ್ಯಕ್ರಮವಿದೆ.
Next Story