ಸ್ಪೀಕರ್ ನೋಟಿಸ್ ಕೊಟ್ಟರೆ ಹೋಗುತ್ತೇನೆ: ರಾಮಲಿಂಗಾರೆಡ್ಡಿ

ಬೆಂಗಳೂರು, ಜು.8: ನನ್ನ ರಾಜೀನಾಮೆಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ಸ್ಪೀಕರ್ ನೋಟಿಸ್ ಕೊಟ್ಟರೆ ಹೋಗಿ ಅವರನ್ನು ಭೇಟಿಯಾಗುತ್ತೇನೆ. ಸದ್ಯಕ್ಕೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರು ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಕೇವಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕಲ್ಲ ಎಂದರು.
ಶಾಸಕಿ ಸೌಮ್ಯಾರೆಡ್ಡಿ ರಾಜೀನಾಮೆ ವಿಚಾರವಾಗಿ ಅವರನ್ನೇ ಕೇಳಿ. ನನ್ನ ರಾಜೀನಾಮೆಗೆ ಈ ಹಿಂದೆಯೇ ಕಾರಣವನ್ನು ತಿಳಿಸಿದ್ದೇನೆ. ನಾನು ಯಾರ ಜೊತೆಯೂ ಮಾತುಕತೆ ನಡೆಸಲು ಹೋಗಿಲ್ಲ. ಸಚಿವ ಸ್ಥಾನಕ್ಕೆ ಲಾಬಿಯೂ ಮಾಡಿಲ್ಲ. ನನಗೆ ಯಾವುದೇ ಸ್ಥಾನಮಾನ ಬೇಡವೆಂದು ಹೇಳಿದ್ದೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
Next Story





