Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಕ್ರಮ ಗೋಸಾಗಾಟ ಶಂಕೆಯಲ್ಲಿ ತಲವಾರು ದಾಳಿ...

ಅಕ್ರಮ ಗೋಸಾಗಾಟ ಶಂಕೆಯಲ್ಲಿ ತಲವಾರು ದಾಳಿ ಪ್ರಕರಣ: ನಾಲ್ವರ ಬಂಧನ

► ರೌಡಿಶೀಟರ್ ಭವಿತ್‌ರಾಜ್‌ಗೆ ಪೊಲೀಸ್ ಶೂಟೌಟ್ ► ಪೊಲೀಸರ ಮೇಲೆಯೇ ತಲವಾರು ಬೀಸಿದ ಆರೋಪಿ

ವಾರ್ತಾಭಾರತಿವಾರ್ತಾಭಾರತಿ9 July 2019 9:04 PM IST
share
ಅಕ್ರಮ ಗೋಸಾಗಾಟ ಶಂಕೆಯಲ್ಲಿ ತಲವಾರು ದಾಳಿ ಪ್ರಕರಣ: ನಾಲ್ವರ ಬಂಧನ

ಮಂಗಳೂರು, ಜು.9: ಅಕ್ರಮ ಗೋಸಾಗಾಟದ ಸಂಶಯದಲ್ಲಿ ಮಾವಿನಹಣ್ಣು ಸಾಗಾಟಗಾರರ ಮೇಲೆ ತಲವಾರು ದಾಳಿ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿ ದಾಳಿಗೆ ಯತ್ನಿಸಿದ ಘಟನೆ ಅಡ್ಯಾರ್ ದಡ್ಡೊಳಿಗೆದಲ್ಲಿ ನಡೆದಿದ್ದು, ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗಾಗಿ ಶೂಟೌಟ್ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಗುಂಡೇಟಿನಿಂದ ರೌಡಿಶೀಟರ್ ಸರಿಪಳ್ಳ ನಿವಾಸಿ ಭುವಿತ್ ರಾಜ್ (35)ಗೆ ಗಾಯವಾಗಿದೆ. ಆರೋಪಿ ಚೂರಿಯಿಂದ ಹಲ್ಲೆ ನಡೆಸಿದ ಪರಿಣಾಮ ಹೆಡ್‌ಕಾನ್‌ಸ್ಟೇಬಲ್ ವಿನೋದ್ (36) ಎಂಬವರಿಗೂ ಗಾಯವಾಗಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಪರಾರಿಗೆ ಯತ್ನಿಸಿದ ಸಂದೇಶ್ (25), ಸನತ್ (22), ಆರೋಪಿಗಳಿಗೆ ಬೈಕ್ ನೀಡಿ ಸಹಕರಿಸಿದ ಅಶ್ವತ್ಥ್ (25) ಎಂಬವನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಸಂದೇಶ್ 2018ರಲ್ಲಿ ಕೊಟ್ಟಾರದಲ್ಲಿ ನಡೆದ ಬಶೀರ್ ಕೊಲೆ ಪ್ರಕರಣ ಆರೋಪಿ ಎಂದು ತಿಳಿದುಬಂದಿದೆ.

ಕಾರ್ಯಾಚರಣೆ ಹೀಗಾಯ್ತು: ಕುಲಶೇಖರ ಚೌಕಿ ಬಳಿ ಮಾವಿನಹಣ್ಣು ವ್ಯಾಪಾರಿಗಳ ವಾಹನವನ್ನು ತಡೆದು ಹಲ್ಲೆ ನಡೆಸಿ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂಬ ಆರೋಪವಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಭುವಿತ್ ಮೆಲ್ಕಾರ್‌ನಲ್ಲಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಆ ಕಡೆ ತೆರಳುತ್ತಿದ್ದರು.

ಆದರೆ ಆರೋಪಿ ಕಾರಿನಲ್ಲಿ ಮಂಗಳೂರಿನತ್ತ ಬರುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಕಾರನ್ನು ಬೆನ್ನಟ್ಟಿದ್ದಾರೆ. ಇದನ್ನು ನೋಡಿದ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರು ಬೆನ್ನಟ್ಟುವುದನ್ನು ನೋಡಿ ಕಾರನ್ನು ಅಡ್ಯಾರ್ ದಡ್ಡೊಳಿಗೆಯತ್ತ ಕೊಂಡೊಯ್ದು ಪರಾರಿಗೆ ಯತ್ನಿಸಿದ್ದಾರೆ.

ಈ ಸಂದರ್ಭ ಪೊಲೀಸರು ನಿಲ್ಲಲು ಸೂಚನೆ ನೀಡುತ್ತಿದ್ದಂತೆ ಭುವಿತ್ ತಲವಾರು, ಚೂರಿಗಳನ್ನು ಹೆಡ್‌ಕಾನ್‌ಸ್ಟೇಬಲ್ ವಿನೋದ್ ಅವರ ಮೇಲೆ ಬೀಸಿದ್ದಾನೆ. ಇದರಿಂದ ವಿನೋದ್ ಅವರಿಗೆ ಗಾಯವಾಗಿದ್ದು, ಕೂಡಲೇ ಪ್ರಕರಣದ ಗಂಭೀರತೆಯನ್ನು ಅರಿತ ಕಂಕನಾಡಿ ನಗರ ಇನ್‌ಸ್ಪೆಕ್ಟರ್ ಅಶೋಕ್ ರೌಡಿಶೀಟರ್ ಭುವಿತ್‌ರಾಜ್ ಮೇಲೆ ಶೂಟೌಟ್ ಮಾಡುತ್ತಾರೆ. ಇದರಿಂದ ಆರೋಪಿ ಗಂಭೀರ ಗಾಯಗೊಂಡು ಅಲ್ಲೇ ಕುಸಿದು ಬೀಳುತ್ತಾನೆ.

ಭವಿತ್‌ರಾಜ್ ಮೇಲೆ ಶಕ್ತಿನಗರದಲ್ಲಿ ಕೊಲೆಯತ್ನ ಪ್ರಕರಣ, ಜಪ್ಪಿನಮೊಗರುವಿನಲ್ಲಿ ಹಲ್ಲೆ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ.

ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಆಗಮಿಸಿ ಪರಿಶೀಲನೆ ನಡೆಸಿದರು.

ಪ್ರಕರಣ ವಿವರ: ಜು.7ರಂದು ಮುಂಜಾನೆ 4 ಗಂಟೆಗೆ ಉಮರ್ ಫಾರೂಕ್, ಅಶ್ಫಕ್ ಎಂಬವರು 407 ವಾಹನದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ಗಳನ್ನು ತುಂಬಿಸಿ ಉಳಾಯಿಬೆಟ್ಟುವಿನಿಂದ ಮಂಗಳೂರು ಮಾರ್ಕೆಟ್‌ಗೆ ಬರುತ್ತಿದ್ದರು. ಇದನ್ನು ನೋಡಿದ ಮೂವರು ದುಷ್ಕರ್ಮಿಗಳು ಅಕ್ರಮ ದನದ ಸಾಗಾಟ ವಾಹನವೆಂದು ಭಾವಿಸಿ ವಾಹನವನ್ನು ಬೈಕ್‌ನಲ್ಲಿ ಬೆನ್ನಟ್ಟಿಕೊಂಡು ಬಂದಿದ್ದರು.

ಈ ಸಂದರ್ಭ 407 ವಾಹನದಲ್ಲಿದ್ದವರು ‘ಮಾವಿನಹಣ್ಣು’ ಎಂದು ಹೇಳಿದ್ದರೂ ಯುವಕರು ಮಾತ್ರ ಬೆನ್ನುಬಿಡದೆ ವಾಹನಕ್ಕೆ ತಡೆಯೊಡ್ಡಿದ್ದಾರೆ. ಈ ಸಂದರ್ಭ ಚಾಲಕ ಸೇರಿದಂತೆ ಇಬ್ಬರು ಟೆಂಪೋವನ್ನು ಕುಲಶೇಖರ ಚೌಕಿ ಬಳಿ ನಿಲ್ಲಿಸಿ ಓಡಿ ಹೋಗಿದ್ದು, ಟೆಂಪೋದಲ್ಲಿದ್ದ ಫಾರೂಕ್ ಎಂಬವರಿಗೆ ದುಷ್ಕರ್ಮಿಗಳು ತಲವಾರು, ರಾಡ್‌ಗಳಿಂದ ದಾಳಿ ನಡೆಸಿದ್ದರು. ಹಲ್ಲೆಯಿಂದ ಫಾರೂಕ್‌ಗೆ ಗಂಭೀರ ಗಾಯಗಳಾಗಿ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು.

ಹಲ್ಲೆಯ ಬಳಿಕ ದುಷ್ಕರ್ಮಿಗಳು 407 ಟೆಂಪೋವನ್ನು ಚಾಲನೆ ಮಾಡಿಕೊಂಡು ಕುಲಶೇಖರ ಚೌಕಿಯಿಂದ ಕುಲಶೇಖರ ಚರ್ಚ್ ಸಮೀಪ ಕೊಂಡೊಯ್ದು ನಿಲ್ಲಿಸಿದ್ದರು. ಅಲ್ಲದೆ, ವಾಹನದಲ್ಲಿದ್ದ 70 ಸಾವಿರ ರೂ. ನಗದು ದರೋಡೆಗೈದಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದಳ ಉಪಪೊಲೀಸ್ ಆಯುಕ್ತ ರಾಮರಾವ್ ಮತ್ತು ಸಿಬ್ಬಂದಿ, ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಅಶೋಕ್, ಎಚ್‌ಸಿ ಮದನ್, ರವೀಂದ್ರನಾಥ್ ರೈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

3 ತಿಂಗಳಲ್ಲಿ 3ನೇ ಶೂಟೌಟ್

ಜಪ್ಪಿನಮೊಗರು ಬಳಿ ಮೇ 9ರಂದು ತಡರಾತ್ರಿ ಕಂಕನಾಡಿ ಕುಂಟಾಲಗುಡ್ಡೆ ಬಜಾಲ್ ನಿವಾಸಿ ನಟೋರಿಯಸ್ ರೌಡಿ ಗೌರೀಶ್ ಯಾನೆ ಸುಜಿತ್ ಯಾನೆ ಗೌರಿ (29) ಎಂಬಾತನನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ್ದ ಸಂದರ್ಭ ಆತ ಮಾರಕಾ ಯುಧದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಇದರಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಶೀನಪ್ಪ ಎಂಬವರು ಗಾಯಗೊಂಡಿದ್ದರು.

ಮೇ 28ರಂದು ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರದೀಪ್ ಹಾಗೂ ಸಿಬ್ಬಂದಿ ಟಾರ್ಗೆಟ್ ಗ್ರೂಪ್‌ನ ಕುಖ್ಯಾತ ರೌಡಿ ಉಮರ್ ಫಾರೂಕ್‌ನನ್ನು ನಗರದ ಪಚ್ಚನಾಡಿ ಸಮೀಪ ಬಂಧಿಸಲು ಹೋದ ಸಂದರ್ಭ ಆತ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದು, ಈ ಸಂದರ್ಭ ಆತ್ಮರಕ್ಷಣೆಗಾಗಿ ಎಸ್ಸೈ ಪ್ರದೀಪ್ ತನ್ನ ರಿವಾಲ್ವರ್‌ನಿಂದ ಉಮರ್ ಫಾರೂಕ್‌ನ ಮೇಲೆ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದರು.

ಇದೀಗ ಭುವಿತ್‌ ರಾಜ್ ಮೇಲೆ ಶೂಟೌಟ್ ನಡೆಸಿ ಬಂಧಿಸುವ ಮೂಲಕ 3 ತಿಂಗಳಲ್ಲಿ 3 ಶೂಟೌಟ್ ಪ್ರಕರಣ ನಗರದಲ್ಲಿ ನಡೆದಂತಾಗಿದೆ.

ಮೂರು ತಂಡಗಳ ಕಾರ್ಯಾಚರಣೆ

ವಾಹನದಲ್ಲಿದ್ದವರು ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮೂರು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿದ್ದರು.

ಮಂಗಳೂರು ದಕ್ಷಿಣ ಎಸಿಪಿ ಕೆ.ರಾಮರಾವ್, ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಅಶೋಕ್, ಮಂಗಳೂರು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸಿದ್ಧಗೌಡ ಭಜಂತ್ರಿ ನೇತೃತ್ವದಲ್ಲಿ ಮೂರು ತಂಡಗಳು ಕಾರ್ಯಾಚರಣೆ ನಡೆಸಿದವು. ಕುಲಶೇಖರ ವ್ಯಾಪ್ತಿಯ ನಡೆದ ಕ್ರಿಮಿನಲ್ ಹಿನ್ನೆಲೆಯ 50ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ಮೂರು ತಂಡಗಳು ವಿಚಾರಣೆ ನಡೆಸಿದ್ದವು. ಜತೆಗೆ, ಘಟನೆ ನಡೆದ ಪ್ರದೇಶದ ಹಲವೆಡೆಯ ಸಿಸಿಟಿವಿ ಫೂಟೇಜ್‌ಗಳನ್ನು ಪಡೆದು, ಪರಿಶೀಲನೆ ನಡೆಸಿದ್ದರು. ಆರೋಪಿಗಳ ಮುಖದ ಗುರುತು ಸಿಕ್ಕ ಬಳಿಕ ಕಾರ್ಯಾಚರಣೆ ಮತ್ತಷ್ಟು ಚುರುಕು ಪಡೆಯಿತು. ಮಂಗಳವಾರ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ತಂಡಗಳು ಯಶಸ್ವಿಯಾಗಿವೆ.

ಪೊಲೀಸರ ಮೇಲೆ ರೌಡಿಶೀಟರ್ ದಾಳಿ: ಪ್ರಕರಣ ದಾಖಲು

ಅಕ್ರಮ ಗೋಸಾಗಾಟ ಶಂಕೆಯಲ್ಲಿ ತಲವಾರು ದಾಳಿ ಪ್ರಕರಣದ ಆರೋಪಿಯನ್ನು ಕಂಕನಾಡಿ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಬಂಧಿಸಲು ಮುಂದಾದಾಗ ರೌಡಿಶೀಟರ್ ಪೊಲೀಸರ ಮೇಲೆಯೇ ತಲವಾರು, ಚಾಕುವಿನಿಂದ ದಾಳಿ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ಸರಿಪಳ್ಳ ನಿವಾಸಿ ಭುವಿತ್ ರಾಜ್ (35) ವಿರುದ್ಧ ಕೇಸು ದಾಖಲಾಗಿದೆ.

ಪೊಲೀಸರು ನಿಲ್ಲಲು ಸೂಚನೆ ನೀಡುತ್ತಿದ್ದಂತೆ ಭುವಿತ್ ತಲವಾರು, ಚೂರಿಗಳನ್ನು ಹೆಡ್‌ಕಾನ್‌ಸ್ಟೇಬಲ್ ವಿನೋದ್ ಅವರ ಮೇಲೆ ಬೀಸಿದ್ದಾನೆ. ಇದರಿಂದ ವಿನೋದ್ ಅವರಿಗೆ ಗಾಯವಾಗಿದ್ದವು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಯತ್ನ), 353, 332 (ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X