ಕೆಮ್ತೂರಿನಲ್ಲಿ ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟ
ಉಡುಪಿ, ಜು.9: ಅಲೆವೂರು ಗ್ರಾಪಂ ವ್ಯಾಪ್ತಿಯ ಕೆಮ್ತೂರಿನಲ್ಲಿ ಸಾಧನಾ ಯುವಕ ಮಂಡಲ ಹಾಗೂ ಸಾಧನಾ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟವನ್ನು ಜಿಪಂ ಅಧ್ಯಕ್ಷ ದಿನಕರ್‌ಬಾಬು ಉದ್ಘಾಟಿಸಿದರು.
ಕೃಷಿಯೇ ಜೀವನಾಡಿಯಾಗಿರುವ ಹಳ್ಳಿಗಳಿಂದ ಇಂದು ಕೃಷಿ ನಶಿಸುತ್ತಿ ರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಇಂತಹ ಕಾರ್ಯಕ್ರಮಗಳು ಮತ್ತೆ ಕೃಷಿ ಬದುಕಿಗೆ ಉತ್ತೇಜನ ನೀಡಲು ಸಹಕಾರಿಯಾಗಬೇಕು ಎಂದರು.
ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ ನಾಯಕ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣಕ್ರೀಡೆಗಳನ್ನು ನೆನಪಿಸಲು ಇಂಥ ಕಾರ್ಯಕ್ರಮ ಸಹಕಾರಿ ಎಂದರು. ಕೆಸರು ಗದ್ದೆಯ ಮಣ್ಣಿನ ಫಲವತ್ತತೆ ಹಾಗೂ ಔಷಧೀಯ ಗುಣಗಳ ಕುರಿತ ಮಾಹಿತಿುನ್ನು ಅವರು ಇಲ್ಲಿ ಹಂಚಿಕೊಂಡರು.
ಸ್ಥಳೀಯ ಹಿರಿಯರಾದ ಸುಂದರ್ ಶೆಟ್ಟಿ, ಪ್ರಭಾಕರ ಹೆಗ್ಡೆ, ಜಯರಾಮ ಶೆಟ್ಟಿ, ಸಾಧನಾ ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಸಾಧನಾ ಯುವತಿ ಮಂಡಲದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ ಹಂಸರಾಜ್, ಪಂಚಾಯತ್ ಸದಸ್ಯರಾದ ಕೃಷ್ಣ ಜತ್ತನ್ನ ಮತ್ತಿತರರು ಉಪಸ್ಥಿತ ರಿದ್ದರು.
ದೀಪಕ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು.





