ಸೋಮಾರಿಯಾಗಿ ಇಡೀ ದಿನ ತಿನ್ನುತ್ತಾ ಕಾಲ ಕಳೆಯಬೇಡಿ!: ಸರಕಾರಿ ಅಧಿಕಾರಿಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಚ್ಚರಿ

ಬೀಜಿಂಗ್, ಜು. 10: ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಸರಕಾರಿ ಅಧಿಕಾರಿಗಳು, ಏನೂ ಕೆಲಸ ಮಾಡದೆ ಇಡೀ ದಿನ ಕುಳಿತುಕೊಂಡು ತಿನ್ನುತ್ತಾ ಸಮಯ ಕಳೆಯಲು ನೆಪವನ್ನಾಗಿ ಬಳಸಬಾರದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ನಡೆದ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರ ಸಭೆಯೊಂದರಲ್ಲಿ ಹೇಳಿದ್ದಾರೆ.
2012ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಕ್ಸಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಕೆಲಸ ಮಾಡದೆ ಹಾಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸುಮ್ಮನಿರುವ ಮೂಲಕ ಶಿಕ್ಷೆಯಿಂದ ಪಾರಾಗಬಹುದು ಎಂದು ಯೋಚಿಸುವ ಅಧಿಕಾರಿಗಳನ್ನು ಅವರು ನಿರಂತರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
‘‘ಶುದ್ಧ ಹಸ್ತರಾಗಿರುವುದು ಹಾಗೂ ಜವಾಬ್ದಾರಿಯುತವಾಗಿರುವುದು- ಈ ಎರಡರ ನಡುವೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ’’ ಎಂದು ಕ್ಸಿ ಹೇಳಿರುವುದಾಗಿ ಅಧಿಕೃತ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.‘‘ಭ್ರಷ್ಟಾಚಾರ ನಿಗ್ರಹ ಅಭಿಯಾನವನ್ನು ಜವಾಬ್ದಾರಿ ಸ್ವೀಕರಿಸದಿರಲು ಅಥವಾ ಏನೂ ಮಾಡದೆ ಇರಲು ನೆವವಾಗಿ ನೀವು ಬಳಸುವಂತಿಲ್ಲ’’ ಎಂದು ಕ್ಸಿ ಹೇಳಿದ್ದಾರೆ.





