ಪಾಕ್ ಚಾನೆಲ್ಗಳ ಸೆನ್ಸಾರ್ಶಿಪ್: ಜಾಗತಿಕ ಮಾಧ್ಯಮ ಸಂಸ್ಥೆ ಖಂಡನೆ
ಇಸ್ಲಾಮಾಬಾದ್, ಜು. 10: ಪಾಕಿಸ್ತಾನದ ಮೂರು ಟೆಲಿವಿಶನ್ ಚಾನೆಲ್ಗಳ ಏರ್ವೇವ್ ಸಂಪರ್ಕವನ್ನು ರದ್ದುಪಡಿಸಿರುವುದಕ್ಕಾಗಿ ಜಾಗತಿಕ ಮಾಧ್ಯಮ ಕಾವಲು ಸಂಸ್ಥೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಪಾಕಿಸ್ತಾನ ಸರಕಾರವನ್ನು ಟೀಕಿಸಿದೆ.
ಪಾಕಿಸ್ತಾನದ ಈ ಕ್ರಮವು ಸರ್ವಾಧಿಕಾರಿ ಪ್ರವೃತ್ತಿಯ ಸೂಚನೆಯಾಗಿದ್ದು, ಪತ್ರಕರ್ತರ ಮೇಲೆ ಒತ್ತಡವನ್ನು ಹೇರುತ್ತದೆ ಎಂಬುದಾಗಿ ಹೇಳಿಕೆಯೊಂದರಲ್ಲಿ ಅದು ಹೇಳಿದೆ.
ಪ್ರತಿಪಕ್ಷ ನಾಯಕಿ ಮರ್ಯಮ್ ನವಾಝ್ರ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿರುವುದಕ್ಕಾಗಿ ಅಬ್ ತಕ್ ಟಿವಿ, 24 ನ್ಯೂಸ್ ಮತ್ತು ಕ್ಯಾಪಿಟಲ್ ಟಿವಿಗಳ ಪ್ರಸಾರವನ್ನು ನಿಲ್ಲಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.
‘ತಾಂತ್ರಿಕ ಸಮಸ್ಯೆ’ಗಳಿಂದಾಗಿ ಚಾನೆಲ್ಗಳು ಸಿಗುತ್ತಿಲ್ಲ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇದು ಅತ್ಯಂತ ನಾಚಿಕಗೆಟ್ಟ ಸೆನ್ಸಾರ್ಶಿಪ್ ಆಗಿದೆ ಎಂದು ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.
ಅರ್ಜೆಂಟೀನದ ಮಾಜಿ ಅಧ್ಯಕ್ಷ ಫೆರ್ನಾಂಡೊ ಡಿ ಲಾ ರುವ ಅವರ ಪಾರ್ಥಿವ ಶರೀರವನ್ನೊಳಗೊಂಡ ಶವಪೆಟ್ಟಿಗೆಯನ್ನು ರಾಜಧಾನಿ ಬ್ಯೂನಸ್ ಐರಿಸ್ನಲ್ಲಿರುವ ಸಂಸತ್ತು ಕಾಂಗ್ರೆಸ್ನ ಕಟ್ಟಡದ ಒಳಗೆ ಮಂಗಳವಾರ ಇಡಲಾಗಿದ್ದು, ಸೈನಿಕರು ಗೌರವ ಅರ್ಪಿಸಿದರು. 81 ವರ್ಷ ಅಧ್ಯಕ್ಷರು ಮಂಗಳವಾರ ನಿಧನರಾದರು.