Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿನಾಶದ ಹೊಸ್ತಿಲಲ್ಲಿದ್ದ ಕೆರೆಗಳಿಗೆ...

ವಿನಾಶದ ಹೊಸ್ತಿಲಲ್ಲಿದ್ದ ಕೆರೆಗಳಿಗೆ ಜೀವದಾನ: ರೋಟರಿ ಚಾರಿಟೇಬಲ್ ಟ್ರಸ್ಟ್ ನಿಂದ ಸಮಾಜಮುಖಿ ಕಾರ್ಯ

ವಾರ್ತಾಭಾರತಿವಾರ್ತಾಭಾರತಿ11 July 2019 9:19 PM IST
share
ವಿನಾಶದ ಹೊಸ್ತಿಲಲ್ಲಿದ್ದ ಕೆರೆಗಳಿಗೆ ಜೀವದಾನ: ರೋಟರಿ ಚಾರಿಟೇಬಲ್ ಟ್ರಸ್ಟ್ ನಿಂದ ಸಮಾಜಮುಖಿ ಕಾರ್ಯ

ಮೂಡುಬಿದಿರೆ: ನೀರು ಸರ್ವ ಕಾಲಕ್ಕೂ ಸಂಜೀವಿಯಾಗಿದ್ದು ಮುಂದಿನ ಪೀಳಿಗೆಗೆ ನೀರಿನ ಕೊರತೆ ಬರಬಾರದು. ಬೇಸಿಗೆ ಕಾಲದಲ್ಲಿ ಬರಿದಾಗುತ್ತಿರುವ ಬಾವಿಗಳಲ್ಲಿ ನೀರು ತುಂಬುವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮೂಡುಬಿದಿರೆ ನಗರ ವ್ಯಾಪ್ತಿಯಲ್ಲಿರುವ ವಿನಾಶದ ಅಂಚಿಗೆ ಸೇರಿಕೊಳ್ಳಲಿದ್ದ 4 ಕೆರೆಗಳನ್ನು 'ರೋಟಾಲೇಕ್ಸ್' ಎನ್ನುವ ಯೋಜನೆ ಮೂಲಕ ಅಭಿವೃದ್ಧಿ ಪಡಿಸಿ ಜೀವಜಲ ತುಂಬುವಂತೆ ಮಾಡುವ ಮೂಲಕ ಮೂಡುಬಿದಿರೆ ರೋಟರಿ ಕ್ಲಬ್‍ನ ರೋಟರಿ ಚಾರಿಟೇಬಲ್ ಟ್ರಸ್ಟ್ ಸಮಾಜ ಮುಖಿಯಾದ ಕಾರ್ಯವನ್ನು ಮಾಡಿ ಗಮನ ಸೆಳೆದಿದೆ.

ನಗರ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಈಗಾಗಲೇ ಕಾಯಕಲ್ಪ ನೀಡಿರುವ ರೋಟರಿ ಗ್ರಾಮೀಣ ಪ್ರದೇಶದಲ್ಲಿ, ಇಲ್ಲಿವರೆಗಿನ ಯೋಜನೆಗಳಲ್ಲಿ ಅತೀ ದೊಡ್ಡ ಮಟ್ಟದಲ್ಲಿ ಕೆರೆಯ ಅಭಿವೃದ್ಧಿ ಮಾಡಿದೆ.

ಗತಕಾಲದ ಕೆರೆಗೆ ಕಾಯಕಲ್ಪ

ಈ ಹಿಂದೆ ನೀರು ತುಂಬಿಕೊಂಡು ಇಡೀ ಗ್ರಾಮಕ್ಕೆ ನೀರಿನ ಆಶ್ರಯವಾಗಿದ್ದ ನಂತರದ ದಿನಗಳಲ್ಲಿ ಹೂಳು ತುಂಬಿಕೊಂಡು ಸಂಪೂರ್ಣ ಮುಚ್ಚಿ ಹೋಗಿ ಮೈದಾನದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವ  ಮೂಡುಬಿದಿರೆ-ಬಂಟ್ವಾಳ ರಸ್ತೆ ಬಳಿಯ  ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಕೆಂಪ್ಲಾಜೆ ಕೆರೆಯನ್ನು ಗಂಭೀರವಾಗಿ ಪರಿಗಣಿಸಿರುವ ರೋಟರಿ ಆಶ್ರಯದ ರೋಟರಿ ಚಾರಿಟೇಬಲ್ ಟ್ರಸ್ಟ್ ಈ ಬ್ರಹತ್ ಕೆರೆಯನ್ನು ಅಭಿವೃದ್ಧಿ ಪಡಿಸಲು 1.25 ಕೋಟಿ ಯೋಜನೆಯ ನೀಲ ನಕಾಶೆಯನ್ನು ರೂಪಿಸಿದ್ದು, ಇದಕ್ಕಾಗಿ ಎಂಆರ್‍ಪಿಎಲ್ ಒಂದು ಕೋಟಿ ರೂಪಾಯಿ ಅನುದಾನವನ್ನು ಪಡೆದುಕೊಂಡಿದೆ.

ಉಳಿದಂತೆ 25 ಲಕ್ಷ ರೂವನ್ನು ಭರಿಸಿ ಕಳೆದ ಕಳೆದ ನಾಲ್ಕು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು, ಶೇ.90 ಅಭಿವೃದ್ಧಿ ಕೆಲಸ ಅಂತಿಮಗೊಂಡು ಲೋಕಾರ್ಪಣೆಗೆ ಸಿದ್ಧಗೊಳ್ಳುವ ಮೂಲಕ 1 ಎಕರೆ ಜಾಗದಲ್ಲಿ 500X100 ಅಡಿ ವಿಸ್ತೀರ್ಣದಲ್ಲಿ ಕೆರೆ ಹೊಸ ರೂಪು ಪಡೆದಿದೆ.

ಕೆರೆಯ ನಾಲ್ಕೂ ಬದಿಗೂ ಎರಡು ಮೀಟರ್‍ನಷ್ಟು ಎತ್ತರಕ್ಕೆ ತಳಭಾಗದಲ್ಲಿ ಕಪ್ಪು ಕಲ್ಲಿನ ತಡೆಗೋಡೆಯನ್ನು ನಿರ್ಮಿಸಿದ್ದು ಮೂರು ಬದಿಯಲ್ಲಿ ಕಾಡಿನಿಂದ ಬರುವ ಮಳೆಯ ಮತ್ತು ಒರತೆಯ ನೀರು ಕೆರೆಗೆ ಹರಿಯಲು ಅನುಕೂಲವಾಗುವಂತೆ ದೊಡ್ಡ ಪೈಪುಗಳನ್ನು ಅಳವಡಿಸಲಾಗಿದೆ. ಸುಮಾರು 8 ಸಾವಿರ ಲೋಡ್ ಮಣ್ಣು ಕೆರೆಯಿಂದ ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಸುತ್ತಲೂ ಮರಗಿಡಗಳನ್ನು ನೆಟ್ಟು ಹಸುರೀಕರಣ, ನಡಿಗೆ ಪಥ ಹಾಗೂ ಕಲ್ಲುಬೆಂಚುಗಳನ್ನಿಟ್ಟು ಕಡಲಕೆರೆಯ ರೂಪವನ್ನು ನೀಡುವ ಯೋಜನೆಯೂ ಇದೆ ಎನ್ನಲಾಗಿದೆ.

ಮೊಹಲ್ಲಾ, ಉಳಿಯ, ಸುಭಾಸ್‍ನಗರ ಕೆರೆಗಳಿಗೂ ಮರುಜೀವ

ರೋಟರಿ ಚಾರಿಟೇಬಲ್ ಟ್ರಸ್‍ನ "ರೋಟಾಲೇಕ್ಸ್" ಯೋಜನೆಯ ಮೂಲಕ ಮೂರು ವರ್ಷಗಳ ಹಿಂದೆ 12 ಲಕ್ಷ ವೆಚ್ಚದಲ್ಲಿ ಮೊಹಲ್ಲಾ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು ಇದನ್ನು ಟ್ರಸ್ಟ್ ಮೂಲಕ ಅಭಿವೃದ್ಧಿ ಪಡಿಸಿದ ಮೊದಲ ಕೆರೆಯಾಗಿದೆ. ಇದಕ್ಕೆ ಅಂದಿನ ಶಾಸಕ ಅಭಯಚಂದ್ರ ಜೈನ್ 2ಲಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2ಲಕ್ಷ, ಸ್ಥಳೀಯರಾದ ಶರೀಫ್ 50 ಉಳಿದಂತೆ 7.50ಲಕ್ಷವನ್ನು ಟ್ರಸ್ಟ್ ಹಾಕಿದೆ. ಎರಡನೇಯ ಯೋಜನೆಯಾಗಿ ಉಳಿಯ ಕೆರೆಯನ್ನು  ಅಭಿವೃದ್ಧಿ ಪಡಿಸಿದ್ದು ಇದಕ್ಕೆ 8ಲಕ್ಷ ಖರ್ಚಾಗಿದ್ದು 2 ಲಕ್ಷ ಧರ್ಮಸ್ಥಳದಿಂದ ಬಂದಿದೆ.  ಈ ವರ್ಷ ಮೂರನೇ ಯೋಜನೆಯಾಗಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೋಟೆಬಾಗಿಲು ಸಮೀಪವಿರುವ ಸುಭಾಸ್‍ನಗರದ ಕೆರೆಯನ್ನು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈ ಯೋಜನೆಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ರೂಪಾಯಿಯ ಅನುದಾನ ಲಭಿಸಿದೆ ಮತ್ತು ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ಅವರು 2.75ಲಕ್ಷದ ಮಣ್ಣನ್ನು ತೆಗೆದುಕೊಳ್ಳುವ ಮೂಲಕ ವೆಚ್ಚವನ್ನು ಭರಿಸಿದ್ದು ಉಳಿದಂತೆ ಟ್ರಸ್ಟ್ ಭರಿಸಿದೆ.

ಕಡಲಕೆರೆ ಅಭಿವೃದ್ಧಿ

ಕಳೆದ 20 ವರ್ಷಗಳ ಹಿಂದೆ 15 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ಕಡಲಕೆರೆಯನ್ನು ರೋಟರಿ ಕ್ಲಬ್ ಮೂಲಕ ಅಭಿವೃದ್ಧಿ ಪಡಿಸಲಾಗಿತ್ತು. ಮುಂದೆ ಜಿಲ್ಲಾಡಳಿತದಿಂದ ಹಂತ ಹಂತವಾಗಿ ಈ ಕೆರೆಯು ಅಭಿವೃದ್ಧಿಯಾಗಿತ್ತು. ಈ ಕೆರೆಯಲ್ಲಿ ದೋಣಿ ವಿಹಾರ ಸಹಿತ ಸಮಗ್ರ ಅಭಿವೃದ್ಧಿಗೊಂಡಿದ್ದು ಪ್ರವಾಸಿತಾಣವಾಗಿ ರೂಪುಗೊಂಡಿದ್ದು ಇದರ ಅಭಿವೃದ್ಧಿ ನಿಟ್ಟಿನಲ್ಲಿ "ರೋಟಾಲೇಕ್ಸ್" ಮೂಲಕ ಕೆರೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ.

ಅಭಿವೃದ್ಧಿಯ ರೂವಾರಿಗಳು

ಇಂಜಿನಿಯರ್ ರವಿಪ್ರಸಾದ್ ಉಪಾಧ್ಯಾಯ ಕೆರೆಗಳ ಅಭಿವೃದ್ಧಿಯ ನೀಲ ನಕಾಶೆ ರೂಪಿಸಿದ್ದು ಜಲತಜ್ಞ ಪಿ.ಕೆ.ತೋಮಸ್ ತಾಂತ್ರಿಕ ಮಾಹಿತಿಯನ್ನು ನೀಡಿದ್ದಾರೆ.

''ಬರಿದಾಗುತ್ತಿರುವ ನೀರಿನ ಮೂಲಗಳಿಗೆ ಮತ್ತೆ ಉಕ್ಕುವಂತೆ ಮಾಡುವುದು. ನೀರು ಸಂರಕ್ಷಣೆಯ ಬಗ್ಗೆ  ಜಾಗೃತಿ ಮೂಡಿಸುವುದು. ಹರಿದು ಹೋಗುತ್ತಿರುವ ಮಳೆಯ ನೀರನ್ನು ತಡೆಗಟ್ಟಿ ಅದನ್ನು ಸಂಗ್ರಹಿಸಲು ಕೆರೆಗಳು ಪೂರಕವಾಗುತ್ತವೆ. ಕೆರೆಗಳಲ್ಲಿ ನೀರು ಶೇಖರಣೆಯಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗುತ್ತದೆ. ರೈತರಿಗೆ, ಜನರಿಗೆ ನೀರಿನ ಪ್ರಯೋಜನವಾಗುವ ಉದ್ದೇಶ ರೋಟಾಲೇಕ್ಸ್‍ನದ್ದು. ಮೂಡುಬಿದಿರೆಯ ಬಹುತೇಕ ಕೆರೆಗಳ ರಕ್ಷಣೆ, ಅವುಗಳಿಗೆ ಕಾಯಕಲ್ಪ ನೀಡುವ ಕೆಲಸವನ್ನು ರೋಟರಿ ಚಾರಿಟೇ ನಾವು ಮಾಡುತ್ತಿದ್ದೇವೆ.'' 

- ಡಾ.ಮುರಳೀಕೃಷ್ಣ, ಅಧ್ಯಕ್ಷ, ರೋಟರಿ ಚಾರಿಟೇಬಲ್ ಟ್ರಸ್ಟ್

''ರೋಟಾಲೇಕ್ಸ್ ಯೋಜನೆ ರೂಪಿಸುವ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕಿನ ಕೆರೆಗಳ ಬಗ್ಗೆ ಸಮೀಕ್ಷೆ ನಡೆಸಿದ್ದು, ಈಗಾಗಲೇ ಮೂರು ಕೆರೆಗಳು ಅಭಿವೃದ್ಧಿ ಆಗಿದ್ದು, ನಾಲ್ಕನೇ ಯೋಜನೆಯಾಗಿ ಕೆಂಪ್ಲಾಜೆ ಕೆರೆ ಅಭಿವೃದ್ಧಿಯಾಗುತ್ತಿದೆ. ಇನ್ನಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಮ್ಮ ರೋಟರಿಯದ್ದು.'' 
- ಪಿ.ಕೆ ಥೋಮಸ್, ಯೋಜನೆಯ ಉಸ್ತುವಾರಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X