ವಿಶ್ವಕಪ್ :ಇಂಗ್ಲೆಂಡ್ ಫೈನಲ್ ಗೆ
ಬರ್ಮಿಂಗ್ಹ್ಯಾಮ್, ಜು.11: ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ವಿಶ್ವಕಪ್ ಸೆಮಿ ಫೈನಲ್ನಲ್ಲಿ 8 ವಿಕೆಟ್ಗಳ ಅಂತರದಿಂದ ಮಣಿಸಿದ ಆತಿಥೇಯ ಇಂಗ್ಲೆಂಡ್ ಫೈನಲ್ಗೆ ಪ್ರವೇಶಿಸಿದೆ.
ಲಾರ್ಡ್ಸ್ನಲ್ಲಿ ಜು.14 ರಂದು ನಡೆಯುವ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಗೆಲ್ಲಲು 224ರನ್ ಗುರಿ ಪಡೆದಿದ್ದ ಇಂಗ್ಲೆಂಡ್ 32.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು.
ಮೊದಲವಿಕೆಟ್ ಜೊತೆಯಾಟದಲ್ಲಿ 124 ರನ್ ಗಳಿಸಿದ ಜೇಸನ್ ರಾಯ್(85) ಹಾಗೂ ಬೈರ್ಸ್ಟೋವ್(34) ಇಂಗ್ಲೆಂಡ್ಗೆ ಭರ್ಜರಿ ಆರಂಭ ನೀಡಿದರು. ಜೋ ರೂಟ್(ಔಟಾಗದೆ 49) ಹಾಗೂ ಮೊರ್ಗನ್ (ಔಟಾಗದೆ 45)3ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 79 ರನ್ ಗಳಿಸಿ ತಂಡಕ್ಕೆ ಇನ್ನೂ 107 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.
ಇಂಗ್ಲೆಂಡ್ 4ನೇ ಬಾರಿ ವಿಶ್ವಕಪ್ ಫೈನಲ್ಗೆ ತಲುಪಿದೆ. ಆಸ್ಟ್ರೇಲಿಯ ಮೊದಲ ಬಾರಿ ಸೆಮಿ ಫೈನಲ್ನಲ್ಲಿ ಸೋಲುಂಡಿದೆ.
Next Story