ನಯಾಗರ ಜಲಪಾತದಿಂದ ಬಿದ್ದರೂ ಬದುಕುಳಿದ ವ್ಯಕ್ತಿ!
ಮಾಂಟ್ರಿಯಲ್ (ಕೆನಡ), ಜು. 11: ಕೆನಡದ ನಯಾಗರ ಜಲಪಾತದ ನೀರಿನಲ್ಲಿ ಕೊಚ್ಚಿಹೋಗಿ 188 ಅಡಿ (57 ಮೀಟರ್) ಕೆಳಗೆ ಬಿದ್ದ ವ್ಯಕ್ತಿಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ.
ಕೆಳಗೆ ನದಿಯಲ್ಲಿ ಬಂಡೆಯೊಂದರ ಮೇಲೆ ಅವರು ಕುಳಿತಿರುವುದು ಪತ್ತೆಯಾಗಿದೆ ಎಂದು ಕೆನಡ ಪೊಲೀಸರು ಬುಧವಾರ ತಿಳಿಸಿದರು. ಅವರಿಗೆ ಗಂಭೀರ ಗಾಯವಾಗಿಲ್ಲ.
ಅಮೆರಿಕ-ಕೆನಡ ಗಡಿ ಭಾಗದಲ್ಲಿ ಇರುವ ನಯಾಗರ ಜಲಪಾತದ ಕೆನಡದ ಭಾಗದಲ್ಲಿ ಅವರನ್ನು ಪತ್ತೆಹಚ್ಚಲಾಯಿತು.
ನಯಾಗರ ಜಲಪಾತದ ಮೇಲಿನಿಂದ ಬಿದ್ದು ಬದುಕುಳಿದ ನಾಲ್ಕನೆಯವ ಈ ವ್ಯಕ್ತಿಯಾಗಿದ್ದಾನೆ.
Next Story