ಅಂತರಾಷ್ಟ್ರೀಯ ಮಟ್ಟದ ಚಿಂತನ ಡ್ರಾಯಿಂಗ್ ಸ್ಪರ್ಧೆ: ಗೋಳ್ತಮಜಲು ಶಾಲೆಯ ಮುಫ್ರೀನಾಗೆ ಚಿನ್ನ, ಬೆಳ್ಳಿ

ಬಂಟ್ವಾಳ, ಜು. 12: ಇತ್ತೀಚಿಗೆ ಗೋಳ್ತಮಜಲುವಿನಲ್ಲಿ ನಡೆದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ರ ಸಾಲಿನ ಅಂತರಾಷ್ಟ್ರೀಯ ಮಟ್ಟದ ಚಿಂತನ ಡ್ರಾಯಿಂಗ್ ಸ್ಪರ್ಧೆಯಲ್ಲಿ ಇದರಲ್ಲಿ ಗೋಳ್ತಮಜಲು ಶಾಲೆಯ ವಿದ್ಯಾರ್ಥಿನಿ ಮುಫ್ರೀನಾ ಬಾನು ಅವರು ಜಿಲ್ಲಾ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಚಿನ್ನ ಹಾಗೂ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳೂರಿನ ಸಕ್ರ್ಯೂಟ್ ಹೌಸ್ ನಲ್ಲಿ ಮುಫ್ರಿನ್ ಬಾನುವಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಜಯಲತಾ ಬಿ., ಪೋಷಕರಾದ ಮುಸ್ತಾಕ್ ಬೇಗ್ ನೆಲ್ಲಿಗುಡ್ಡೆ, ಶಾಹಿದಾ ಬಾನು, ಸಚಿವರ ಆಪ್ತ ಸಹಾಯಕ ಚಂದ್ರಶೇಖರ ಪಾತೂರು, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಉಪಸ್ಥಿತರಿದ್ದರು.
Next Story





