ವಿಂಬಲ್ಡನ್: ನಡಾಲ್ ಓಟಕ್ಕೆ ಫೆಡರರ್ ಬ್ರೇಕ್
ಲಂಡನ್, ಜು.13: ಹಳೆಯ ಎದುರಾಳಿ ರಫೇಲ್ ನಡಾಲ್ ಅವರನ್ನು 7-6 (7/3), 106, 6-3, 6-4 ಸೆಟ್ಗಳಿಂದ ಸೋಲಿಸಿದ ರೋಜರ್ ಫೆಡರರ್ 12ನೇ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ್ದಾರೆ.
ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್ ಫೆಡರರ್ (37) ಅವರು ತಮ್ಮ 31ನೇ ಗ್ರ್ಯಾಂಡ್ಸ್ಲಾಂ ಫೈನಲ್ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಲಿದ್ದಾರೆ.
ಅಗ್ರ ಶ್ರೇಯಾಂಕಿತ ಹಾಗೂ ನಾಲ್ಕು ಬಾರಿಯ ಚಾಂಪಿಯನ್ ಜೊಕೊವಿಕ್ ಆರನೇ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ್ದಾರೆ. ಜೊಕೊವಿಕ್, ಸ್ಪೇನ್ನ 23ನೇ ಶ್ರೇಯಾಂಕಿತ ರಾಬರ್ಟೊ ಬಟಿಸ್ಟಾ ಅಗೂಟ್ ಅವರನ್ನು 6-2, 4-6, 6-3, 6-2ರಿಂದ ಸೋಲಿಸಿದ್ದರು.
ಫೆಡರರ್ ಅವರು ಗ್ರ್ಯಾಂಡ್ಸ್ಲಾಂ ಫೈನಲ್ ತಲುಪಿದ ಮೂರನೇ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 39 ವರ್ಷದ ಕೆನ್ ರೋಸ್ವಾಲ್ 1974ರ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಫೈನಲ್ ತಲುಪಿದ್ದರು. ರವಿವಾರ ನಡೆಯುವ ಫೈನಲ್ನಲ್ಲಿ ಫೆಡರರ್ಗೆ ಜೊಕೋವಿಕ್ ಅವರಿಂದ ಕಠಿಣ ಸವಾಲು ಎದುರಾಗಲಿದ್ದು, ಜೊಕೊವಿಕ್ ಸವಾಲನ್ನು ಮಣಿಸಿದರೆ, ಫೆಡರರ್ 21ನೇ ಪ್ರಮುಖ ಪ್ರಶಸ್ತಿ ಗೆದ್ದಂತಾಗುತ್ತದೆ. 15 ಗ್ರ್ಯಾಂಡ್ಸ್ಲಾಮ್ ವಿಜೇತ ಜೊಕೊವಿಕ್ ವಿರುದ್ಧ ಆಡಿದ ಪಂದ್ಯಗಳಲ್ಲಿ ಫೆಡರರ್ 22ನ್ನು ಗೆದ್ದು, 25 ಪಂದ್ಯ ಸೋತಿದ್ದಾರೆ. ಕಳೆದ ತಿಂಗಳು ರೋಲಂಡ್ ಗರೋಸ್ ಸೆಮಿಫೈನಲ್ನಲ್ಲಿ ನಡಾಲ್ ಎದುರು ಅನುಭವಿಸಿದ ಹೀನಾಯ ಸೋಲಿಗೆ ಫೆಡರರ್ ಇಂದು ಸೇಡು ತೀರಿಸಿಕೊಂಡರು.