ಮಂಗಳನಗರ: ಶಂಸುಲ್ ಉಲಮಾ ದಾರುಸ್ಸಲಾಮ್ ದರ್ಸ್ ಉದ್ಘಾಟನೆ

ಮಂಗಳೂರು, ಜು.13: ಮಂಗಳನಗರದಲ್ಲಿ ಕಾರ್ಯಾಚರಿಸುತ್ತಿರುವ ಶಂಸುಲ್ ಉಲಮಾ ದಾರುಸ್ಸಲಾಮ್ ದರ್ಸ್ ಉದ್ಘಾಟನೆ ಕಾರ್ಯಕ್ರಮ ಮಂಗಳನಗರ ಜುಮಾ ಮಸೀದಿಯಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿ ಮಾತನಾಡಿದ ಅಸ್ಸೈಯದ್ ಅಲಿ ತಂಙಳ್ ಕುಂಬೋಳ್, ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ ಅಶ್ಲೀಲತೆ ಮತ್ತು ಅಕ್ರಮ ಚಟುವಟಿಕೆಗಳು ಎಲ್ಲೆ ಮೀರುತ್ತಿದ್ದು ಇಂತಹಾ ಸನ್ನಿವೇಶದಲ್ಲಿ ಧಾರ್ಮಿಕ ಪ್ರಜ್ಞೆ ಯನ್ನು ಮೂಡಿಸುವ ದರ್ಸ್ ಸಂಪ್ರದಾಯದ ಶಿಕ್ಷಣವನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಹುಸೈನ್ ದಾರಿಮಿ, ದರ್ಸಿನ ಅನಿವಾರ್ಯತೆ ಮತ್ತು ಸಂಪತ್ತಿನ ಸದ್ಬಳಕೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹ್ಮಾನ್ ತಬೂಕ್ ದಾರಿಮಿ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಲ್ ಫೈಝಿ ಸಾಂದರ್ಭಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕೆ.ಬಿ.ದಾರಿಮಿ, ಮಂಗಳನಗರ ಜುಮಾ ಮಸೀದಿ ಅದ್ಯಕ್ಷ ಮತ್ತು ದಾರುಸ್ಸಲಾಮ್ ಸಂಸ್ಥೆಯ ಖಜಾಂಚಿ ಅಬು ಸಾಲಿಹ್ ಹಾಜಿ, ಖತೀಬ್ ಹನೀಫ್ ಬದರಿ ಉಸ್ತಾದ್, ಸಂಸ್ಥೆಯ ಮುದರ್ರಿಸ್ ಹನೀಫ್ ದಾರಿಮಿ, ಶರೀಫ್ ಅರ್ಶದಿ, ರಿಯಾಝ್ ರಹ್ಮಾನಿ ದೇರಳಕಟ್ಟೆ ಮತ್ತು ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭ ಪವಿತ್ರ ಹಜ್ಜ್ ಯಾತ್ರಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಸಂಜೆ ಮಜ್ಲಿಸುನ್ನೂರ್ ಮತ್ತು ಶಂಸುಲ್ ಉಲಮಾ ಮೌಲಿದ್ ಕಾರ್ಯಕ್ರಮವು ರಾಜ್ಯ ದಾರಿಮಿ ಒಕ್ಕೂಟದ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ನೇತೃತ್ವದಲ್ಲಿ ನಡೆಯಿತು.
ಸಂಸ್ಥೆಯ ವಿದ್ಯಾರ್ಥಿಗಳಾದ ಹಸನ್ ಸುಹೈಲ್ ಭಾಷಣ ಮಾಡಿದರು. ಲುಕ್ಮಾನ್ ಸಂಸ್ಥೆಯ ಬಗ್ಗೆ ಹಾಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಝೀಝ್ ದಾರಿಮಿ ಸ್ವಾಗತಿಸಿದರು. ಹನೀಫ್ ದಾರಿಮಿ ವಂದಿಸಿದರು.







