ಪಾದುವ ಕಾಲೇಜು: ವಿದ್ಯಾರ್ಥಿ ಸಂಘಗಳ ಉದ್ಘಾಟನೆ

ಮಂಗಳೂರು, ಜು.13: ನಂತೂರಿನಲ್ಲಿರುವ ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ 2019-20ನೇ ವರ್ಷದ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಇತ್ತೀಚೆಗೆ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯನ್ ಸಿಕ್ವೇರ ಮಾತನಾಡಿ, ನಾಯಕರು ಹುಟ್ಟಿನಿಂದಲೇ ರೂಪುಗೊಳ್ಳುವುದಿಲ್ಲ. ಬದಲಾಗಿ ನಿರಂತರ ಪರಿಶ್ರಮ ಹಾಗೂ ಛಲದಿಂದ ಮಾತ್ರ ನಾಯಕತ್ವವನ್ನು ರೂಪಿಸಲು ಸಾಧ್ಯ ಎಂದು ನುಡಿದರು.
ನಾರಾವಿ ಪದವಿ ಕಾಲೇಜಿನ ಪ್ರಾಂಶುಪಾಲ ವಂ. ಅರುಣ್ ಲೋಬೊ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ವಿನ್ಸೆಂಟ್ ಮೊಂತೇರೊ ಮಾತನಾಡಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ರೆ. ಫಾ. ಆಲ್ವಿನ್ ಸೆರಾವೊ ಸ್ವಾಗತಿಸಿ, ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.
ನೂತನ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೆಲ್ಸ್ಟನ್ ನೊರೊನ್ಹ ಹಾಗೂ ಕಾರ್ಯದರ್ಶಿಯಾಗಿ ಅಕ್ಷಾ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಡೆಲ್ವಿನ್, ಕ್ರೀಡಾ ಕಾರ್ಯದರ್ಶಿಯಾಗಿ ಆಕಾಶ್ ಆಯ್ಕೆಯಾಗಿದ್ದಾರೆ.
ಕಾಲೇಜು ವಿಧ್ಯಾರ್ಥಿ ಸಂಘದ ಪ್ರಸಕ್ತ ವರ್ಷದ ಅಧ್ಯಕ್ಷರಾದ ಮೆಲ್ಸ್ಟನ್ ತಮ್ಮ ಅನಿಸಿಕೆಗಳನ್ನು ಹಾಗೂ ಮುಂದೆ ಇರುವ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಶ್ರಮಿಸುವುದಾಗಿ ಹೇಳಿದರು. ಕಾರ್ಯದರ್ಶಿ ಅಕ್ಷಾ ವಂದಿಸಿದರು.
ವಿಧ್ಯಾರ್ಥಿ ಮೋಹಿತ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲ ರೋಶನ್ ಸಾಂತುಮಾಯರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿಧ್ಯಾರ್ಥಿಗಳಿಂದ ವಿವಿಧ ಮನೋರಂಜನಾತ್ಮಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.







