ಜು.14: ಮೆಲ್ಕಾರ್‌ನಲ್ಲಿ ಆರ್.ಆರ್. ಮೆಟರ್ನಿಟಿ ಆ್ಯಂಡ್ ಜನರಲ್ ಹಾಸ್ಪಿಟಲ್ ಉದ್ಘಾಟನೆ
ಬಂಟ್ವಾಳ, ಜು.13: ಮೆಲ್ಕಾರ್‌ನ ಆರ್.ಆರ್.ಕಮರ್ಶಿಯಲ್ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿ ನೂತನವಾಗಿ ಆರಂಭಿಸಲಾದ ಆರ್.ಆರ್. ಮೆಟರ್ನಿಟಿ ಆ್ಯಂಡ್ ಜನರಲ್ ಹಾಸ್ಪಿಟಲ್ ಜು.14ರಂದು ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ 10ಕ್ಕೆ ಹಿರಿಯ ವೈದ್ಯೆ ಡಾ.ಎಚ್.ಟಿ.ಮನೋರಮಾ ರಾವ್ ಅವರು ನೂತನ ಆಸ್ಪತ್ರೆಯನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ವಿವೇಕಾನಂದ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಪ್ರಭಾಕರ ಭಟ್ ಭಾಗವಹಿಸುವರು.
ಲತಾ ರಾವ್, ರಾಮರಾಜ್ ರಾವ್, ಡಾ.ಆರ್.ಕಾವ್ಯಾ ರಶ್ಮಿ ರಾವ್, ಡಾ.ರಿತೇಶ್ ಎಸ್.ಕೆ., ಅನ್ನಪೂರ್ಣಾ ಎಂ., ರುದ್ರ ರಾವ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





