ಮೈಥಿಲಿಯಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳ ವಿಜೇತರ ಪ್ರಕಟಣೆ

ಹೊಸದಿಲ್ಲಿ,ಜು.13: ಕಳೆದ ತಿಂಗಳು 23 ಭಾರತೀಯ ಭಾಷೆಗಳಲ್ಲಿ ಯುವ ಪುರಸ್ಕಾರ ಮತ್ತು 22 ಭಾಷೆಗಳಲ್ಲಿ ಬಾಲ ಸಾಹಿತ್ಯ ಪುರಸ್ಕಾರಗಳ ವಿಜೇತರನ್ನು ಪ್ರಕಟಿಸಿದ್ದ ಸಾಹಿತ್ಯ ಅಕಾಡೆಮಿಯು ಶುಕ್ರವಾರ ಮೈಥಿಲಿ ಭಾಷೆಯಲ್ಲಿ ಈ ಪುರಸ್ಕಾರಗಳ ವಿಜೇತರನ್ನು ಘೋಷಿಸಿದೆ.
ಅಮಿತ್ ಪಾಠಕ್ ತನ್ನ ‘ ರಾಗ-ಉಪರಾಗ’ ಕವನ ಸಂಕಲನಕ್ಕಾಗಿ ಯುವ ಪುರಸ್ಕಾರ ಮತ್ತು ‘ಏಕ್ ಫೂಲಕ್ ಗುಲದಸ್ತಾ’ ಕಥಾ ಸಂಕಲನಕ್ಕಾಗಿ ರಿಷಿ ವಶಿಷ್ಠ ಅವರು ಬಾಲ ಸಾಹಿತ್ಯ ಪುರಸ್ಕಾರಗಳನ್ನು ಗೆದ್ದುಕೊಂಡಿದ್ದಾರೆ.
ಬಾಲ ಸಾಹಿತ್ಯ ಪುರಸ್ಕಾರವನ್ನು ಮಕ್ಕಳ ದಿನದಂದು ಪ್ರದಾನಿಸಲಾಗುವುದು,ಯುವ ಪುರಸ್ಕಾರ ಪ್ರದಾನದ ದಿನಾಂಕವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಅಕಾಡೆಮಿಯು ತಿಳಿಸಿದೆ.
ಪ್ರಶಸ್ತಿ ಪುರಸ್ಕೃತರು ತಾಮ್ರ ಫಲಕ ಮತ್ತು ನಗದು 50,000 ರೂ.ಗಳನ್ನು ಪಡೆಯಲಿದ್ದಾರೆ.
Next Story





