Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ನಾಲಗೆಗೆ ಹೊಸ ರುಚಿಯ ಅನುಭವ...

ಉಡುಪಿ: ನಾಲಗೆಗೆ ಹೊಸ ರುಚಿಯ ಅನುಭವ ನೀಡಿದ ಹಲಸಿನ ಹಬ್ಬ

ಹಲಸಿನ ಹಣ್ಣು, ವಿವಿಧ ಖಾದ್ಯ, ತಿಂಡಿ, ಐಸ್‌ಕ್ರೀಮ್‌ಗಳಿಗೆ ಬಂತು ಬೇಡಿಕೆ

ವಾರ್ತಾಭಾರತಿವಾರ್ತಾಭಾರತಿ13 July 2019 10:33 PM IST
share
ಉಡುಪಿ: ನಾಲಗೆಗೆ ಹೊಸ ರುಚಿಯ ಅನುಭವ ನೀಡಿದ ಹಲಸಿನ ಹಬ್ಬ

ಉಡುಪಿ, ಜು.13: ಮೂಗಿನ ಹೊಳ್ಳೆ ಅರಳಿಸುವಂತೆ ಹಲಸಿನ ಘಮಘಮ ಪರಿಮಳ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣವನ್ನು ಪ್ರವೇಶಿಸುವಾಗಲೇ ಬಡಿದರೆ, ಒಳಗೆ ಕಾಲಿಡುತಿದ್ದಂತೆ ಕಣ್ಣಿಗೆ ಬೀಳುತ್ತಿತ್ತು ವಿವಿಧ ಗಾತ್ರ, ವಿವಿಧ ಬಣ್ಣದ, ಪರಿಮಳ ಬೀರುವ ವಿವಿಧ ಜಾತಿಯ ಹಲಸಿನ ಹಣ್ಣುಗಳು, ಬಾಯಲ್ಲಿ ನೀರೂರಿಸುವ ಹಲಸಿನ ಖಾದ್ಯ ಗಳು, ಹೊಸ ರುಚಿಯ ಅನುಭವ ನೀಡುವ ಹಲಸಿನ ವಿವಿಧ ತಿಂಡಿತಿನಿಸುಗಳು, ಐಸ್‌ಕ್ರೀಮ್.

ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳ ಇದೇ ಕಾರಣಕ್ಕಾಗಿ ಜನಜಂಗುಳಿಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕರಾವಳಿಯ ಮಟ್ಟಿಗೆ ಮರದಲ್ಲಿ ಬೆಳೆದು, ಪಶು, ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿ, ಗಿಡದಲ್ಲೇ ಹಣ್ಣಾಗಿ ಮಳೆಗಾಲ ಪ್ರಾರಂಭಗೊಳ್ಳುತಿದ್ದಂತೆ ಅಲ್ಲೇ ಕೊಳೆತು ಬಿದ್ದು ಮಣ್ಣಲ್ಲಿ ಮಣ್ಣಾಗುತಿದ್ದ ಹಲಸು ಇಂದು ಮತ್ತೆ ಜನರನ್ನು ಆಕರ್ಷಿಸಲು ಪ್ರಾರಂಭಿಸಿದೆ. ಇದಕ್ಕೆ ವೌಲ್ಯವರ್ಧನೆಗೊಂಡ ಹಲಸಿನ ವಿವಿಧ ಸಾಧ್ಯತೆಗಳತ್ತ ವಿವಿಧ ಸಂಸ್ಥೆಗಳು ಜನರ ಕಣ್ಣು ತೆರೆಸಿರುವುದೇ ಕಾರಣ ಎನ್ನಬಹುದು.

ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ತೂಪಕೇರಿ ಹೋಬಳಿಯ ರೈತರಾದ ಮುನಿರಾಜು ತನ್ನ ಸಹ ರೈತರೊಂದಿಗೆ ಸುಮಾರು ಒಂದೂವರೆ ಟನ್ ತೂಕದ ವಿವಿಧ ಜಾತಿಗಳ ಹಲಸನ್ನು ತಂದಿದ್ದಾರೆ. ಇವರ ಬಳಿ ಇರುವ ಚಂದ್ರಾವಳಿ, ರುದ್ರಾಕ್ಷಿ, ಆರೆಂಜ್, ಎಲ್ಲೋ ಮುಂತಾದ ಅತ್ಯಂತ ಸಿಹಿಯಾದ ಹಲಸುಗಳಿಗೆ ಮೇಳದಲ್ಲಿ ಹೆಚ್ಚಿನ ಬೇಡಿಕೆಗಳು ಕಂಡುಬಂದವು. ಜನ ಮುಗಿಬಿದ್ದು ಈ ಹಲಸಿನ ರುಚಿ ನೋಡಿ ಖರೀದಿಸಿದರು.

ಜಿಲ್ಲೆಯ ಹಲಸಿನ ಮೇಳಗಳಲ್ಲಿ ಖಾಯಂ ಆಗಿ ಕಂಡುಬರುವ ಕಾರ್ಕಳ ತಾಲೂಕು ಸಾಣೂರಿನ ಶಂಕರಪ್ರಭು ಈ ಬಾರಿ ಸಾಣೂರು ಹಲಸು ಬೆಳೆಗಾರರ ಸಂಘದ ವತಿಯಿಂದ ವಿವಿಧ ಬಗೆಯ ಸ್ಥಳೀಯ ಹಲಸಿನ ತಳಿಗಳೊಂದಿಗೆ ಆಗಮಿಸಿದ್ದರು. ಇವರ ಬಳಿ ಇರುವ ಸುಂದರ ಬಕ್ಕೆ, ಯಡ್ಡಿ ಪಸಂದ್, ಚಂದ್ರ ಬಕ್ಕೆ, ಸಕ್ಕರೆ ಬಕ್ಕೆ, ಜೇನು ಬಕ್ಕೆ, ಮಲ್ಲಿಗೆ ಬಕ್ಕೆ ಹೀಗೆ ಹೆಸರೇ ಬಾಯಲ್ಲಿ ನೀರೂರಿಸುವಂತಿದ್ದು, ಜನರು ಇವರ ಹಲಸಿನ ಹಣ್ಣಿಗೆ ಹಾಗೂ ಇಲ್ಲಿ ತಯಾರಾಗುತಿದ್ದ, ಮಾರಾಟವಾಗುತಿದ್ದ ಹಲಸಿನ ವಿವಿ ತಿಂಡಿಗಳಿಗೆ ಮಾರು ಹೋದಂತಿತ್ತು.

ಇನ್ನೊಂದು ಕಡೆ ಕುಂದಾಪುರ ಕಟ್‌ಬೆಲ್ತೂರಿನ ಜಲಜ ಅವರು ತಮ್ಮೂರಿನ ರೈತರಿಗೆ ಖರೀದಿಸಿ ಸ್ಥಳೀಯ ಹಲಸಿನ ಹಣ್ಣು, ಹಲಸಿನ ಕಾಯಿ, ಹಲಸಿನ ಬೀಜ, ಅದರ ಉಳಿದ ಭಾಗಗಳಿಂದ ಕಬಾಬ್, ವಡೆ, ಮುಳ್ಕ, ಗಟ್ಟಿಗಳನ್ನು ಅಲ್ಲೇ ತಯಾರಿಸಿ ಬಿಸಿಬಿಸಿಯಾಗಿ ಸರಬರಾಜು ಮಾಡುತಿದ್ದರು. ಮೇಳದಲ್ಲಿ ಹತ್ತಾರು ಕಡೆಗಳಲ್ಲಿ ತಯಾರಾಗುತಿದ್ದ ವಿವಿಧ ತಿಂಡಿಗಳಿಂದ ಇಡೀ ಪರಿಸರವೇ ವಿಶಿಷ್ಟ ಪರಿಮಳದ ಮೂಲಕ ರಸಮೊಗ್ಗನ್ನು ಅರಳಿಸುವಂತಿತ್ತು.

ಸಕ್ಕರೆ ಪಾಕದಲ್ಲಿ ಹಾಕಿರಿಸಿದ ಐದಾರು ತಿಂಗಳು ಕಾಲ ಕೆಡದೇ ಉಳಿಯುವ ಹಲಸಿನ ಸೊಳೆ, ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ, ಉಪ್ಪು ನೀರಿನಲ್ಲಿ ಬೇಯಿಸಿದ ಹಲಸಿನ ಹಣ್ಣಿನ ಬೀಜಗಳು ಮಾರಾಟಕ್ಕೆ ಇದ್ದವು. ಅದೇ ರೀತಿ ಹಲಸಿನ ಬೀಜದ ಚಟ್ಟಂಬಡೆ, ಹಣ್ಣಿನ ಜಾಮ್, ಮುಳುಕ, ಪತ್ತೋಳಿ, ಜ್ಯೂಸ್, ಕೇಸರಿಬಾತ್, ಬೋಂಡ, ಪೋಡಿ, ಹಲಸಿನ ಬೀಜದ ಹುಡಿಯಿಂದ ಮಾಡುವ ಬನ್ಸ್, ಚಪಾತಿ ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಜನತೆಗೆ ಹೊಸ ರುಚಿಯ ಅನುಭವ ನೀಡಿದವು.

ಇನ್ನು ಹಲಸಿನ ಬೀಜ ಹಾಗೂ ಸಾವಯವ ಬೆಲ್ಲದಿಂದ ತಯಾರಿಸಿದ ಹೊಳಿಗೆಯನ್ನು ಪುತ್ತೂರಿನ ಕಾರ್ತಿಕ್ ಭಟ್ ಅವರು ತಮ್ಮ ಸಂಗಡಿಗ ರೊಂದಿಗೆ ಅಲ್ಲೇ ತಯಾರಿಸಿ ಬಿಸಿಬಿಸಿಯಾಗಿ ನೀಡಿದರೆ, ಹಲಸಿನ ಐಸ್‌ಕ್ರೀಮ್, ಗರಿಗರಿಯಾದ ಹಪ್ಪಳ, ಚಿಪ್ಸ್, ಮಾಂಬಳ, ಹಲ್ವವೂ ಸಿದ್ಧವಾಗಿತ್ತು. ಕೈಗೆ ಹಲಸಿನ ಮೇಣ ಸ್ವಲ್ಪವೂ ತಾಗದಂತೆ ಹಲಸಿನ ಹಣ್ಣನ್ನು ತುಂಡು ಮಾಡುವ ಯಂತ್ರವೊಂದನ್ನು ಅವರು ಮಾರಾಟಕ್ಕೆಂದು ತಂದಿದ್ದರು.

ಪಿಲಿಕುಳದ ಲಕ್ಷ್ಮೀ ಆಚಾರ್ಯ ತಾವು ತಯಾರಿಸಿದ ಹಲಸಿನ ಹೊಳಿಗೆ ಮೂರು ದಿನ ಕೆಡದೇ ಇರುತ್ತದೆ ಎಂದರೆ, ಉಪ್ಪಿನಂಗಡಿ ತಾಲೂಕಿನ ಇಳಂಕಿಲ ಗ್ರಾಮದ ಖಿಲಾರ್ಸ್‌ ನ್ಯಾಚುರಲ್ ಐಸ್‌ಕ್ರೀಮ್ಸ್‌ನಲ್ಲಿ ಕೇವಲ ಹಲಸಿನ ಐಸ್‌ಕ್ರೀಮ್ ಮಾತ್ರವಲ್ಲದೇ, ಗಾಂಧಾರಿ ಮೆಣಸು, ಬೊಂಡ, ವೀಳ್ಯದೆಲೆ, ಅಡಿಕೆ, ಕಾಡು ಮಾವಿನಿಂದ ತಯಾರಿಸಿದ ಬಗೆಬಗೆಯ ಐಸ್‌ಕ್ರೀಮ್ ಮಾರಾಟಕ್ಕಿತ್ತು. ಜನರು ಕುತೂಹಲದಿಂದ ಇವುಗಳ ರುಚಿಯನ್ನು ನೋಡುತಿದ್ದರು.

ಇಲ್ಲಿ ಆಯೋಜಿಸಲಾಗಿರುವ ಹಲಸಿನ ಹಣ್ಣಿನ ವಿವಿಧ ತಳಿಗಳ ಪ್ರದರ್ಶನ, ಮಾರಾಟ ಹಾಗೂ ವಿವಿಧ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಂದು ಹಲಸಿನಿಂದ ಇಷ್ಟೊಂದು ಬಗೆಯ ತಿನಿಸು-ಖಾದ್ಯ ವೈವಿಧ್ಯತೆಯನ್ನು ತಯಾರಿಸಲು ಸಾಧ್ಯ ಎಂಬ ವಿಚಾರ ಅರಿತು ಅವುಗಳ ತಯಾರಿ ಬ್ಗೆ ಮಾಹಿತಿ ಕೇಳಿ ತಿಳಿದು ಕೊಂಡರು.

ಒಟ್ಟಿನಲ್ಲಿ ಹಲಸಿನ ವೌಲ್ಯವರ್ಧನೆ, ಹೊಸ-ಹೊಸ ಹಲಸಿನ ತಳಿಗಳ ಪರಿಚಯ ಹಾಗೂ ಹಲಸಿನ ವಿವಿಧ ಖಾದ್ಯಗಳ ರುಚಿಯನ್ನು ಜನರಿಗೆ ಉಣಬಡಿಸಿ, ಇದಕ್ಕೆ ವ್ಯವಸ್ಥಿತ ಮಾರುಕಟ್ಟೆ ಒದಗಿಸಿದರೆ ಖಂಡಿತ ಇದು ರೈತರಿಗೆ ಲಾಭದಾಯಕ ಬೆಳೆ ಎನ್ನುವುದನ್ನು ಈ ಹಲಸಿನ ಮೇಳ ಮತ್ತೊಮ್ಮೆ ಖಾತ್ರಿ ಪಡಿಸಿತು.

ಸಿದ್ಧು ಹಲಸುಗೆ ಭಾರೀ ಬೇಡಿಕೆ !

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ‘ಸಿದ್ಧು ಹಲಸು’ ತಳಿಯ ಏಕೈಕ ಮರವಿದೆ. ಇದರ ಹಣ್ಣಿಗೆ ವಿಶಿಷ್ಟ ರುಚಿ ಇದ್ದು, ರಾಜ್ಯದಲ್ಲಿ ಇದಕ್ಕೆ ವಿಶೇಷ ಬೇಡಿಕೆ ಇದೆ. ಇದರಿಂದ ಈ ಒಂದು ಮರದಿಂದ ವಾರ್ಷಿಕ 15ರಿಂದ 20 ಲಕ್ಷ ರೂ. ಆದಾಯವಿದೆ. ಇದನ್ನು ಇಲಾಖೆ ಕಸಿ ಮಾಡಿದ್ದು, ಜನರಿಗೆ ಹಂಚುತ್ತಿದೆ. ಇದರ ಸಸಿಗೂ ಭಾರೀ ಬೇಡಿಕೆ ಇದೆ. ಉಡುಪಿಗೂ ಇದರ ಗಿಡವನ್ನು ನೀಡುತ್ತೇವೆ.

-ನಾಗರಾಜ್ ಎನ್., ವಿಭಾಗೀಯ ತೋಟಗಾರಿಕಾ ಜಂಟಿ ನಿರ್ದೇಶಕ, ಮೈಸೂರು ವಿಭಾಗ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X