ಹೆಮ್ಮೆ ಮತ್ತು ನಿರಾಶೆಯ ಮಿಶ್ರ ಭಾವನೆಗಳೊಂದಿಗೆ ಹೋಗುತ್ತಿದ್ದೇನೆ: ಬ್ರಿಟನ್ ಪ್ರಧಾನಿ ತೆರೇಸಾ ಮೇ
ಲಂಡನ್, ಜು. 13: ಹೆಮ್ಮೆ ಮತ್ತು ನಿರಾಶೆಯ ಮಿಶ್ರ ಭಾವನೆಗಳೊಂದಿಗೆ ನಾನು ಈ ತಿಂಗಳು ನನ್ನ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದು ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ.
ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರಗೆ ಒಯ್ಯುವ ಹಾಗೂ ವಿಭಜನೆಗೊಂಡ ದೇಶವನ್ನು ಒಗ್ಗೂಡಿಸುವ ತನ್ನ ಪ್ರಾಥಮಿಕ ಭರವಸೆಯನ್ನು ಈಡೇರಿಸುವಲ್ಲಿ ಅವರು ವಿಫಲಗೊಂಡಿರುವುದನ್ನು ಸ್ಮರಿಸಬಹುದಾಗಿದೆ.
ನಾನು ಸಂಸದರ ವಿರೋಧವನ್ನು ಕಡೆಗಣಿಸಿದೆ ಎಂದು ಅವರು ಹೇಳಿದರು. ಅವರ ಹಲವಾರು ಬ್ರೆಕ್ಸಿಟ್ ಒಪ್ಪಂದಗಳು ಸಂಸತ್ತಿನಲ್ಲಿ ವಿಫಲವಾಗಿರುವುದನ್ನು ಸ್ಮರಿಸಬಹುದಾಗಿದೆ.
‘‘ನನ್ನ ಕೆಲವನ್ನು ಮಾಡಿರುವ ಬಗ್ಗೆ ಹೆಮ್ಮೆಯಿದೆ, ಆದರೆ ನಿರಾಶೆಯೂ ಇದೆ. ಯಾಕೆಂದರೆ, ನಾನು ಹೆಚ್ಚಿನದನ್ನು ಮಾಡಲು ಬಯಸಿದ್ದೆ’’ ಎಂದು ಅವರು ಶುಕ್ರವಾರ ಬಿಬಿಸಿಗೆ ಹೇಳಿದರು.
Next Story