Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಕುದುರೆ ವ್ಯಾಪಾರಕ್ಕೆ ಜಿಎಸ್‌ಟಿ...

ಕುದುರೆ ವ್ಯಾಪಾರಕ್ಕೆ ಜಿಎಸ್‌ಟಿ ತೆರಿಗೆ....!

*ಚೇಳಯ್ಯ chelayya@gmail.com*ಚೇಳಯ್ಯ chelayya@gmail.com14 July 2019 7:56 PM IST
share
ಕುದುರೆ ವ್ಯಾಪಾರಕ್ಕೆ ಜಿಎಸ್‌ಟಿ ತೆರಿಗೆ....!

 ದೇಶಾದ್ಯಂತ ‘ಕುದುರೆ ವ್ಯಾಪಾರ’ದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಪತ್ರಕರ್ತ ಕಾಸಿ ಚುರುಕಾದ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ನರೇಂದ್ರ ಮೋದಿಯವರು ಈ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲದಿಂದ ನರೇಂದ್ರಮೋದಿಯವರ ನಿವಾಸದೆಡೆಗೆ ದೌಡಾಯಿಸಿದ. ಆದರೆ ನಿವಾಸದ ಗೇಟಿನ ಮುಂದಿರುವ ಚೌಕಿದಾರ್ ಕಾಸಿಯನ್ನು ತಡೆದ. ‘‘ಸಾಹೇಬರು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ. ಅವರಲ್ಲಿ ಏನು ಕೇಳಬೇಕಾಗಿದೆಯೋ ನನ್ನ ಬಳಿಯೇ ಕೇಳಿ....ಪತ್ರಿಕೆಯಲ್ಲಿ ಹಾಕಿ....’’ ಎಂದು ಬಿಟ್ಟ.
‘‘ಆದರೆ ಪ್ರಧಾನಮಂತ್ರಿಯವರು....’’ ಕಾಸಿ ಏನೋ ಹೇಳಲು ಬಾಯಿ ತೆರೆಯುತ್ತಿದ್ದಂತೆಯೇ ಚೌಕಿದಾರ್ ಬಾಯಿ ಮುಚ್ಚಿಸಿದ ‘‘ಮೋದೀಜಿಯವರು ವಿದೇಶದಲ್ಲಿದ್ದಾರೆ. ಯಾರೇ ಬಂದರೂ ನಾನೇ ನಿಭಾಯಿಸುತ್ತಾ ಇದ್ದೇನೆ. ಈಗಷ್ಟೇ ಆರ್ನಬ್ ಗೋಸ್ವಾಮಿ ನನ್ನನ್ನು ಇಂಟರ್ಯೂ ಮಾಡಿ ಹೋದರು.....’’
ಆರ್ನಬ್ ಗೋಸ್ವಾಮಿಯೇ ಇಂಟರ್ಯೂ ಮಾಡಿದ ಬಳಿಕ ನನ್ನದೇನು ಎನ್ನುತ್ತಾ ಕಾಸಿ ಪ್ರಶ್ನೆ ಕೇಳ ತೊಡಗಿದ ‘‘ಸಾರ್...ಕರ್ನಾಟಕ, ಗೋವಾ ಸೇರಿದಂತೆ ದೇಶದೆಲ್ಲೆಡೆ ಕುದುರೆ ವ್ಯಾಪಾರ ಜಾಸ್ತಿಯಾಗಿದೆ...ಇದರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರಿ...?’’
ಚೌಕಿದಾರ್ ಎದ್ದು ನಿಂತು ತನ್ನ ಪ್ಯಾಂಟಿನ ಧೂಳು ಕೊಡವಿ, ದೊಣ್ಣೆಯನ್ನು ಕಂಕುಳಲ್ಲಿ ಸಿಕ್ಕಿಸಿ ಮಾತಿಗೆ ತೊಡಗಿದ ‘‘ಕುದುರೆ ವ್ಯಾಪಾರ ಇರಲಿ, ಕತ್ತೆ ವ್ಯಾಪಾರ ಇರಲಿ ದೇಶದಲ್ಲಿ ವ್ಯಾಪಾರ ಜಾಸ್ತಿಯಾಗಿದೆ ಎನ್ನುವುದನ್ನು ನೀವೇ ಒಪ್ಪಿಕೊಂಡಿರುವುದು ನಮ್ಮ ಸರಕಾರಕ್ಕೆ ಸಿಕ್ಕಿರುವ ಬೆಂಬಲವಾಗಿದೆ. ನಮ್ಮ ಸರಕಾರ ಕುದುರೆ, ಕತ್ತೆ ಸೇರಿದಂತೆ ಕೋತಿ, ನಾಯಿ ಮೊದಲಾದ ವ್ಯಾಪಾರಗಳಿಗೂ ಆದ್ಯತೆ ನೀಡಲಿದೆ....’’
‘‘ಅದಲ್ಲ ಸಾರ್...ಕುದುರೆ ವ್ಯಾಪಾರದಿಂದ ರೆಸಾರ್ಟ್ ರಾಜಕೀಯ ಜಾಸ್ತಿಯಾಗಿದೆ....’’ ಕಾಸಿ ಸ್ಪಷ್ಟ ಪಡಿಸಿದ.
‘‘ನೋಡ್ರೀ....ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ದೇಶದಲ್ಲಿ ಹೆಚ್ಚು ಹೆಚ್ಚು ರೆಸಾರ್ಟ್‌ಗಳನ್ನು ಸರಕಾರ ನಿರ್ಮಿಸಲು ಹೊರಟಿದೆ. ಈ ಮೂಲಕ ಕುದುರೆ ವ್ಯಾಪಾರಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದ್ದೇವೆ....ಇದರಿಂದ ವ್ಯಾಪಾರ, ಉದ್ಯಮ ಇನ್ನಷ್ಟು ಲಾಭದಾಯಕವಾಗುತ್ತದೆ....’’
‘‘ಸಾರ್...ಇದು ನಿಜವಾದ ಕುದುರೆಗಳ ವ್ಯಾಪಾರ ಅಲ್ಲ ಸಾರ್...ಚುನಾವಣೆಯಲ್ಲಿ ಗೆದ್ದ ಶಾಸಕರ ಮಾರಾಟ ನಡೆಯುತ್ತಿದೆ....’’ ಕಾಸಿ ತಿದ್ದಿದ.
‘‘ನೋಡೀ....ಮೋದಿಯವರು ವ್ಯಾಪಾರ, ಉದ್ಯಮಗಳ ಏಳಿಗೆಗಾಗಿ ವಿದೇಶಗಳಲ್ಲಿ ಅಲೆದಾಡುತ್ತಿದ್ದಾರೆ. ಇಂದು ಯಾವ ವ್ಯಾಪಾರವೇ ಆಗಿರಲಿ....ಅದು ಅಭಿವೃದ್ಧಿ ಹೊಂದಬೇಕು...ಶಾಸಕರಾದರೆ ಶಾಸಕರು, ಸಂಸದರಾದರೆ ಸಂಸದರು....ಒಟ್ಟಿನಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಾ ಇದ್ದರೆ ಸಾಕು...’’ ಚೌಕಿದಾರ್ ವಿಶ್ಲೇಷಿಸಿದ.
‘‘ಆದರೆ ಇದರಿಂದ ಪ್ರಜಾಸತ್ತೆಗೆ ಹಾನಿಯಲ್ಲವೇ?’’ ಕಾಸಿ ಆತಂಕದಿಂದ ಕೇಳಿದ.
‘‘ವ್ಯಾಪಾರ ಹೆಚ್ಚಿದರೆ ದೇಶಕ್ಕೆ ಲಾಭ. ಲಾಭವಾದರೆ ದೇಶ ಉಳಿಯುತ್ತದೆ. ದೇಶ ಉಳಿದರೆ ಪ್ರಜಾಸತ್ತೆ ಉಳಿಯುತ್ತದೆ. ಆದುದರಿಂದ ಯಾವುದೇ ಲಾಭದಾಯಕ ವ್ಯಾಪಾರಗಳನ್ನು ಪ್ರೋತ್ಸಾಹಿಸುವುದು ಸರಕಾರದ ಗುರಿ. ಶಾಸಕರ ವ್ಯಾಪಾರದಿಂದ ಅಪಾರ ಹಣ ಬರುತ್ತದೆ ಎಂದಾದರೆ ಅದು ಒಳ್ಳೆಯದೆ’’
‘‘ಅದರಿಂದ ಸರಕಾರಕ್ಕೆ ಲಾಭ ಹೇಗೆ ಸಾರ್?’’ ಚೌಕಿದಾರನ ಅರ್ಥಶಾಸ್ತ್ರ ಅರ್ಥವಾಗದೆ ಕಾಸಿ ಕೇಳಿದ.
‘‘ನೋಡಿ, ಮಾರುಕಟ್ಟೆಯಲ್ಲಿ ಶಾಸಕರಿಗೆ ಒಳ್ಳೆಯ ಬೇಡಿಕೆ ಇದೆ ಎಂದಾದರೆ ಪ್ರತಿ ಶಾಸಕರ ಮೇಲೆ ಶೇ. 40ರಷ್ಟು ಜಿಎಸ್‌ಟಿ ತೆರಿಗೆ ಹಾಕಿದರೆ ಆಯಿತು...ಸರಕಾರಕ್ಕೂ ಲಾಭವಾಗುತ್ತದೆ....ಇದರಿಂದ ಬೇಕಾಬಿಟ್ಟಿ ಶಾಸಕರನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ...’’
‘‘ಅಂದರೆ ಕುದುರೆ ವ್ಯಾಪಾರಕ್ಕೂ ಜಿಎಸ್‌ಟಿ ಹಾಕ್ತೀರಾ?’’
 ‘‘ಹೌದು. ಮುಂದಿನ ಬಜೆಟ್‌ನಲ್ಲಿ ಈ ವ್ಯಾಪಾರಕ್ಕೆ ಉತ್ತೇಜನ ನೀಡಲು ಹೆಚ್ಚು ಹೆಚ್ಚು ರೆಸಾರ್ಟ್‌ಗಳನ್ನು ಸರಕಾರದ ವತಿಯಿಂದಲೇ ತೆರೆಯಲಾಗುತ್ತದೆ. ಇದರಿಂದ ಕುದುರೆ ವ್ಯಾಪಾರಕ್ಕೂ, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ....’’ ಚೌಕಿದಾರ್ ವಿವರಿಸಿದ.
‘‘ಅಂದರೆ ಶಾಸಕರ ಕುದುರೆ ವ್ಯಾಪಾರವನ್ನು ಅಧಿಕೃತ ವ್ಯಾಪಾರವಾಗಿ ಘೋಷಣೆ ಮಾಡುತ್ತಿದ್ದೀರಾ ಸಾರ್...?’’ ಕಾಸಿ ರೋಮಾಂಚನಗೊಂಡು ಕೇಳಿದ.
  ‘‘ದೇಶದಲ್ಲಿ ಬೇರೆ ಉದ್ದಿಮೆಗಳೆಲ್ಲ ಕುಸಿಯುತ್ತಿರುವಾಗ ಈ ಕುದುರೆ ವ್ಯಾಪಾರ ಲಾಭದಾಯಕವಾಗಿ ನಡೆಯುತ್ತಿರುವುದು ಆರ್ಥಿಕತೆಗೆ ಒಂದು ಆಶಾದಾಯಕ ಸಂಗತಿಯಾಗಿದೆ. ಆದುದರಿಂದ ಈ ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸಲು ಇನ್ನಷ್ಟು ಯೋಜನೆಗಳನ್ನು ತರಲಿದ್ದೇವೆ. ಮುಖ್ಯವಾಗಿ ಯಾವ ಯಾವ ಕುದುರೆಗಳ ದರ ಎಷ್ಟು ಎನ್ನುವುದನ್ನು ತಿಳಿಸುವ ಆ್ಯಪ್ ಒಂದನ್ನು ತರಲಿದ್ದೇವೆ. ಕಾಲ ಕಾಲಕ್ಕೆ ಅವರ ದರ ಏರಿಕೆ-ಇಳಿಕೆಯಾಗುವುದರ ವಿವರ ಗೊತ್ತಾಗಲಿದೆ. ಹಾಗೆಯೇ ರೆಸಾರ್ಟ್‌ಗಳಲ್ಲಿ ಕುದುರೆಗಳಿಗೆ ಬಿಗಿ ಭದ್ರತೆಯ ಏರ್ಪಾಡನ್ನು ಮಾಡಲು ವಿಶೇಷ ಕಾನೂನನ್ನು ಜಾರಿಗೆ ತರಲಿದ್ದೇವೆ. ಹಾಗೆಯೇ ಸರಕಾರ ರಚನೆಯಾದ ಪ್ರತಿ ಆರು ತಿಂಗಳಿಗೊಮ್ಮೆ ಬಹಿರಂಗವಾಗಿ ಈ ಕುದುರೆಗಳ ಹರಾಜು ಸಂತೆಯನ್ನೂ ಏರ್ಪಡಿಸಲಿದ್ದೇವೆ. ಈ ಹರಾಜಿನಲ್ಲಿ ಯಾವ ಶಾಸಕರೂ ಬಹಿರಂಗವಾಗಿ ಭಾಗವಹಿಸಬಹುದು. ಇಂತಹ ಬಹಿರಂಗ ಹರಾಜಿಗೆ ತೆರಿಗೆ ವಿನಾಯಿತಿಯನ್ನು ಸರ ಾರ ನೀಡಲಿದೆ....’’ ಚೌಕಿದಾರ್ ಘೋಷಿಸಿದ.
‘‘ಸಾರ್...ಈ ಯೋಜನೆಯನ್ನು ಮತದಾರರು ಬೆಂಬಲಿಸಬಹುದೇ?’’ ಕಾಸಿ ಅನುಮಾನ ಮುಂದಿಟ್ಟ.
‘‘ಖಂಡಿತ ಬೆಂಬಲಿಸುತ್ತಾರೆ....ಚುನಾವಣೆಯ ವೇಳೆ ಮತದಾರರ ಹರಾಜಿಗೂ ನಾವು ವ್ಯವಸ್ಥೆ ಮಾಡುತ್ತೇವೆ. ಮತದಾರರ ಮಾರಾಟಕ್ಕೆ ಸರಕಾರ ಸುಂಕ ವಿನಾಯಿತಿ ನೀಡುವುದರಿಂದ ಜನಸಾಮಾನ್ಯರಿಗೆ ತುಂಬಾ ಲಾಭವಾಗುತ್ತದೆ....ಶಾಸಕರದ್ದು ಕುದುರೆ ವ್ಯಾಪಾರವಾದರೆ, ಮತದಾರರದ್ದು ಕತ್ತೆ ವ್ಯಾಪಾರ. ಪ್ರತಿ ಐದು ವರ್ಷಕ್ಕೊಮ್ಮೆ ಈ ಕತ್ತೆಗಳ ಹರಾಜಿಗೆ ಸರಕಾರ ಭಾರೀ ವ್ಯವಸ್ಥೆಯನ್ನು ಮಾಡಲಿದೆ....’’ ಚೌಕಿದಾರ್ ತನ್ನ ದೂರಗಾಮಿ ಯೋಜನೆಗಳನ್ನು ಮುಂದಿಟ್ಟದ್ದೇ ಪತ್ರಕರ್ತ ಕಾಸಿ ಕತ್ತೆಯಂತೆ ಕೆನೆಯುತ್ತಾ ಬೆಂಗಳೂರಿನ ಪತ್ರಿಕಾಕಚೇರಿ ಕಡೆ ಓಡತೊಡಗಿದ.

 

share
*ಚೇಳಯ್ಯ chelayya@gmail.com
*ಚೇಳಯ್ಯ chelayya@gmail.com
Next Story
X