ಉಡುಪಿ ಯಕ್ಷಗಾನ ಕಲಾರಂಗದ ವಾರ್ಷಿಕ ಮಹಾಸಭೆ

ಉಡುಪಿ, ಜು.14: ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯ 44ನೇ ವಾರ್ಷಿಕ ಮಹಾಸಭೆಯು ಜು.13ರಂದು ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಗಣೇಶ್ ರಾವ್ ವಹಿಸಿದ್ದರು. ಅಗಲಿದ ಸಂಸ್ಥೆಯ ಸದಸ್ಯರು ಮತ್ತು ಕಲಾವಿದರಿಗೆ ಉಪಾಧ್ಯಕ್ಷ ಎಸ್.ವಿ.ಭಟ್ ನುಡಿ ನಮನ ಸಲ್ಲಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಗತಸಭೆಯ ವರದಿ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯದರ್ಶಿ ವರದಿ ವಾಚಿಸಿದರು.
ಕೋಶಾಧಿಕಾರಿ ಮನೋಹರ್ ಕೆ. ಯಕ್ಷಗಾನ ಕಲಾರಂಗ ಹಾಗೂ ಯಕ್ಷ ನಿಧಿಯ ಪರಿಶೋಧಿತ ಲೆಕ್ಕಪತ್ರ ಮತ್ತು ಪ್ರೊ.ಸದಾಶಿವ ರಾವ್ ವಿದ್ಯಾಪೋಷಕ್ ಇದರ ಪರಿಶೋಧಿತ ಲೆಕ್ಕಪತ್ರವನ್ನು ಮಂಡಿಸಿದರು. 2019-20ನೇ ಸಾಲಿಗೆ ಸಿ.ಎ. ರಾಜಾರಾಮ ಶೆಟ್ಟಿ ಅವರನ್ನು ಲೆಕ್ಕ ಪರಿಶೋಧರನ್ನಾಗಿ ನೇಮಕ ಮಾಡ ಲಾಯಿತು.
2019-2020ನೇ ಸಾಲಿನ 25 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಹಾಗೂ 17 ಸದಸ್ಯರನ್ನು ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಎಚ್.ಎನ್.ಶೃಂಗೇಶ್ವರ ವಂದಿಸಿದರು.





