ಪಡುಬಿದ್ರಿ: ಹಜ್ ಯಾತ್ರಾರ್ಥಿಗೆ ಬೀಳ್ಕೊಡುಗೆ
ಪಡುಬಿದ್ರಿ: ಪಡುಬಿದ್ರಿ ಜಮಾಅತ್ನ ಹಾಜಿ ಕೆ.ಎಂ. ಅಬ್ದುಲ್ಲಾ ಪತ್ನಿಯೊಂದಿಗೆ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ಸೋಮವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪಡುಬಿದ್ರಿ ಜಮಾಅತ್ ಕಮಿಟಿ, ಇ ಆನತುಲ್ ಮಸಾಕೀನ್ ಅಸೋಸಿಯೇಶನ್ ಹಾಗೂ ಎಸ್ಎಸ್ಎಫ್ ಪಡುಬಿದ್ರಿ ಶಾಖೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಸೀದಿ ಖತೀಬ್ ಹಾಜಿ ಎಸ್.ಎಂ. ಅಬ್ದುಲ್ ರಹ್ಮಾನ್ ಮದನಿ ದುವಾ ನೆರವೇರಿಸಿದರು. ಮಸೀದಿ ಸಮಿತಿಯ ಅಧ್ಯಕ್ಷ ಹಾಜಿ ಪಿ.ಎ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಇಆನತುಲ್ ಮಸಾಕೀನ್ ಅಸೋಸಿಯೇಶನ್ ಅಧ್ಯಕ್ಷ ಎಚ್.ಎಸ್. ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಪಿ.ಎಂ. ಶರೀಫ್, ಎಸ್ಎಸ್ಎಫ್ ಪಡುಬಿದ್ರಿ ಶಾಖೆ ಅಧ್ಯಕ್ಷ ಪಿ.ಎಂ. ತೌಸೀರ್ ಉಪಸ್ಥಿತರಿದ್ದರು.
Next Story