ಕಾಮನ್ವೆಲ್ತ್ ಟಿಟಿ: ಭಾರತದ ಪುರುಷ, ಮಹಿಳಾ ತಂಡ ಸೆಮಿಗೆ
ಕಟಕ್, ಜು.8: ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಗುರುವಾರ ಸೆಮಿ ಫೈನಲ್ಗೆ ತಲುಪಿವೆ.
ಎಫ್ ಗುಂಪಿನ ಸೂಪರ್-8 ಪಂದ್ಯದಲ್ಲಿ ಭಾರತದ ಮಹಿಳಾ ತಂಡ ವೇಲ್ಸ್, ಮಲೇಶ್ಯಾ ಹಾಗೂ ನೈಜೀರಿಯ ತಂಡವನ್ನು 3-0 ಅಂತರದಿಂದ ಮಣಿಸಿ ಅಂತಿಮ-4ರ ಘಟ್ಟ ತಲುಪಿತು. ಪುರುಷರ ತಂಡ ಶ್ರೀಲಂಕಾ ಹಾಗೂ ಮಲೇಶ್ಯವನ್ನು 3-0 ಅಂತರದಿಂದ ಮಣಿಸಿ ಸೆಮಿ ಫೈನಲ್ಗೆ ಪ್ರವೇಶಿಸಿತು. ವೇಲ್ಸ್ ವಿರುದ್ಧ ಕೊನೆಯ ಗ್ರೂಪ್ ಪಂದ್ಯವನ್ನು ಆಡಲು ಬಾಕಿಯಿದೆ.
Next Story