ವಿಚಿತ್ರ ಜೇಡದ ಬೆನ್ನಿನಲ್ಲಿ ಮಾನವ ಮುಖ !
ವೀಡಿಯೊ ವೈರಲ್
ಹೊಸದಿಲ್ಲಿ : ವಿಚಿತ್ರ ಜೇಡದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಅಂತಿಂಥಾ ಜೇಡವಲ್ಲ. ಚೀನಾದಲ್ಲಿ ಕಂಡು ಬಂದಿದೆಯೆನ್ನಲಾದ ಈ ಜೇಡದ ಹಿಂಬದಿ ಮಾನವನ ಮುಖವನ್ನು ಹೋಲುವಂತಿದೆ. ಎರಡು ಕಣ್ಣುಗಳು ಹಾಗೂ ಬಾಯಿ ಕೂಡ ಕಾಣಿಸುತ್ತಿದೆ.
''ಸ್ಪೈಡರ್ ಮ್ಯಾನ್ ಸಿಕ್ಕಿದ್ದಾನೆಯೇ?'' ಎಂಬ ಶೀರ್ಷಿಕೆಯೊಂದಿಗೆ ಚೀನಾದ ಪೀಪಲ್ಸ್ ಡೈಲಿ ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ. ಚೀನಾದ ಹುನಾನ್ ಪ್ರಾಂತ್ಯದ ಮನೆಯೊಂದರಲ್ಲಿ ಈ ವಿಶಿಷ್ಟ ಜೇಡ ಪತ್ತೆಯಾಗಿದೆಯೆನ್ನಲಾಗಿದ್ದು, ಈಗಾಗಲೇ ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ.
ಚೈನಾ ಡೈಲಿ ವರದಿಯಂತೆ ಹುನಾನ್ ಪ್ರಾಂತ್ಯದ ಯುವಾನ್ಜಿಯಾಂಗ್ ನಗರದ ಮನೆಯ ಪಕ್ಕದಲ್ಲಿ ಗಿಡವೊಂದರ ಮೇಲೆ ಈ ಜೇಡ ಇತ್ತೆಂದು ವಿವರಿಸಲಾಗಿದೆ. ಮಹಿಳೆಯೊಬ್ಬರು ಈ ಜೇಡವನ್ನು ಮೊದಲು ಗಮನಿಸಿದ್ದು ಅದರ ಹಿಂಬದಿಯಲ್ಲಿನ ಕಪ್ಪು ಗೆರೆಗಳು ಮಾನವರ ಕೂದಲನ್ನು ಹೋಲುತ್ತದೆ ಎಂದಿದ್ದಾರೆ.
ಈ ವಿಶಿಷ್ಟ ಜೇಡಕ್ಕೆ ಟ್ವಿಟ್ಟರಿಗರು ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ.
Has spiderman been found? This spider with a humanlike face on its back was found at a home in C China's Hunan and has gone viral on Chinese social media. Do you know its species? pic.twitter.com/0iU6qaEheS
— People's Daily, China (@PDChina) July 16, 2019