ಪ್ರಧಾನಿ ಖಾಸಗಿ ಕಾರ್ಯದರ್ಶಿಯಾಗಿ ವಿವೇಕ್ ಕುಮಾರ್ ನೇಮಕ
ಹೊಸದಿಲ್ಲಿ,ಜು.19: ಭಾರತೀಯ ವಿದೇಶ ಸೇವೆ (ಐಎಫ್ಎಸ್) ಅಧಿಕಾರಿ ವಿವೇಕ್ ಕುಮಾರ್ ಅವರನ್ನು ಪ್ರಧಾನಿ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಅಧಿಕೃತ ಆದೇಶದ ಮೂಲಕ ಶುಕ್ರವಾರ ತಿಳಿಸಲಾಗಿದೆ.
ಪ್ರಧಾನಿ ನೇತೃತ್ವದ ಸಂಪುಟ ನೇಮಕ ಸಮಿತಿ ಶುಕ್ರವಾರ ಕುಮಾರ್ ಅವರ ನೇಮಕವನ್ನು ಅಂತಿಮಗೊಳಿಸಿತು. ಅವರು ಸದ್ಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಮಾರ್ ಅವರ ನೇಮಕಾತಿ ಅವರು ಹುದ್ದೆಯನ್ನು ಸ್ವೀಕರಿಸುವ ದಿನದಿಂದ ಜಾರಿಗೆ ಬರಲಿದೆ ಮತ್ತು ಅವರ ಕಾರ್ಯಾವಧಿಯು ಮುಂದಿನ ಆದೇಶದವರೆಗೂ ಮುಂದುವರಿಯಲಿದೆ ಎಂದು ಸರಕಾರಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story