ಮಂಗಳೂರು: ಡೆಂಗ್ಗೆ ಟಿವಿ ಕ್ಯಾಮರಾಮ್ಯಾನ್ ಬಲಿ
ಮಂಗಳೂರು, ಜು.21: ದ.ಕ. ಜಿಲ್ಲಾಡಳಿತ, ಮನಪಾದಿಂದ ತೀವ್ರ ಕಾರ್ಯಾಚರಣೆಯ ಹೊರತಾಗಿಯೂ ನಗರದಲ್ಲಿ ಡೆಂಗ್ ಹಾವಳಿ ಮುಂದುವರಿದಿದ್ದು, ಖಾಸಗಿ ಸುದ್ದಿವಾಹಿನಿ ಬಿಟಿವಿ ಕ್ಯಾಮರಾಮ್ಯಾನ್ ನಾಗೇಶ್ ಪಡು(35) ಎಂಬವರು ಡೆಂಗ್ನಿಂದ ರವಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಾಗೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಡೆಂಗ್ ಬಾಧಿಸಿರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಳೆದ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story