ಅಜ್ಜೀಪುರ: ಕಾರು ಬೆಂಕಿಗಾಹುತಿ

ಹನೂರು, ಜು.22: ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿಯಿಂದ ಇಡೀ ಕಾರೇ ಹೊತ್ತು ಉರಿದ ಘಟನೆ ತಾಲ್ಲೂಕಿನ ಅಜ್ಜೀಪುರದ ಬಳಿ ಇಂದು ನಡೆದಿದೆ.
ಇದು ಚೆನ್ನೈ ಮೂಲದ ಆನಂದ್ ರಾಜ್ ಎಂಬವರಿಗೆ ಸೇರಿದ ಡಸ್ಟರ್ ಕಾರು ಎಂದು ತಿಳಿದು ಬಂದಿದೆ ಘಟನೆ ವಿವರ: ಆನಂದರಾಜ್ ಸಹಿತ ನಾಲ್ವರು ಚೆನ್ನೈಯಿಂದ ಕಾರಿನಲ್ಲಿ ಚಾಮರಾಜನಗರಕ್ಕೆ ಕೆಲಸದ ನಿಮಿತ್ತ ಆಗಮಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಸಮೀಪ ಕಾರಿನ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿತೆನ್ನಲಾಗಿದೆ. ತಕ್ಷಣವೇ ಕಾರಿನ ಒಳಗಡೆ ಕುಳಿತಿದ್ದ ನಾಲ್ವರು ಹೊರಗೆ ಇಳಿದಿದ್ದಾರೆ. ಬಳಿಕ ಕಾಣಿಸಿಕೊಂಡ ಬೆಂಕಿಗೆ ಕಾರು ಸಂಪೂರ್ಣ ಭಸ್ಮವಾಗಿದೆ.
ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕಾಗಮಿಸಿದ ಹನೂರು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.










