ಎಂಟಿಎನ್ ಎಲ್ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ: 100ಕ್ಕೂ ಅಧಿಕ ಜನರು ಸಿಲುಕಿರುವ ಶಂಕೆ

ಮುಂಬೈ, ಜು.22: ಇಲ್ಲಿನ ಬಾಂದ್ರಾದಲ್ಲಿರುವ ಎಂಟಿಎನ್ ಎಲ್ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, 100ಕ್ಕೂ ಹೆಚ್ಚು ಜನರು ಕಟ್ಟಡದ ಟೆರೇಸ್ ನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. 14 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
9 ಮಹಡಿಗಳ ಕಟ್ಟಡದ 3 ಮತ್ತು 4ನೆ ಮಹಡಿಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ.
Next Story