Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹೆಚ್ಚಿದ ಹಾನಿ

ವಾರ್ತಾಭಾರತಿವಾರ್ತಾಭಾರತಿ23 July 2019 6:31 PM IST
share
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹೆಚ್ಚಿದ ಹಾನಿ

ಮಂಗಳೂರು, ಜು.23: ದ.ಕ.ಜಿಲ್ಲಾದ್ಯಂತ ಮಂಗಳವಾರವೂ ಮಳೆ ಮುಂದುವರಿಯುವುದರೊಂದಿಗೆ ಅಲ್ಲಲ್ಲಿ ಹಾನಿಯೂ ಸಂಭವಿಸಿದೆ. ಆದರೆ, ಯಾವುದೇ ಸಾವು-ನೋವು ಆದ ಬಗ್ಗೆ ವರದಿಯಾಗಿಲ್ಲ. ಈ ಮಧ್ಯೆ ಮಳೆ ಹಾನಿ ತಡೆಗಟ್ಟಲು ಜಿಲ್ಲಾಡಳಿತವು ಸಮರೋಪಾದಿಯ ಪ್ರಯತ್ನ ಮುಂದುವರಿಸಿದೆ.

ವಿಟ್ಲ ಸಮೀಪದ ಕಸಬಾ ಗ್ರಾಮದ ಪಾರ್ವತಿ ಎಂಬವರ ಮನೆಯ ಚಾವಡಿ ಕುಸಿದ ಪರಿಣಾಮ 40 ಸಾವಿರ ರೂ. ನಷ್ಟವಾಗಿದೆ. ಕಸಬಾ ಗ್ರಾಮದ ಸಿಂಥಿಯಾ ಎಂಬವರ ಆವರಣ ಗೋಡೆ ಕುಸಿದಿದೆ. ಅನಂತಾಡಿ ಗ್ರಾಮದ ಕೇಶವ ಪೂಜಾರಿಯ ಕೊಟ್ಟಿಗೆಗೆ ಹಾನಿಯಾಗಿದ್ದು, 20 ಸಾವಿರ ರೂ. ನಷ್ಟವಾಗಿದೆ. ಸಜಿಪ ಮುನ್ನೂರು ಗ್ರಾಮದ ಕುಶಲ ಎಂಬವರ ಮನೆಗೆ ಹಾನಿಯಾಗಿದೆ.

ಕುಂಜತ್ತಬೈಲ್ ಗ್ರಾಮಸ ಸವಿತಾ ಎಂಬವರ ಮನೆಗೆ ಹಾನಿಯಾಗಿದ್ದು, 40 ಸಾವಿರ ರೂ. ನಷ್ಟವಾಗಿದೆ. ಕೆಂಜಾರು ಗ್ರಾಮದ ವಿಶ್ವನಾಥ ಪೂಜಾರಿಯ ಮನೆಗೆ ಹಾನಿಯಾಗಿದ್ದು, 45 ಸಾವಿರ ರೂ. ನಷ್ಟವಾಗಿದೆ. ಬೋಳಿಯಾರು ಗ್ರಾಮದ ಹಾಜಿರಮ್ಮರ ಮನೆಗೆ ಕುಸಿದ ಪರಿಣಾಮ 1 ಲಕ್ಷ ರೂ. ನಷ್ಟವಾಗಿದೆ.

ಕಸಬಾ ಬಝಾರ್‌ನ ಪ್ರಮೋದ್‌ರ ಮನೆಗೆ ಹಾನಿಯಾಗಿ 40 ಸಾವಿರ ರೂ. ನಷ್ಟವಾಗಿದೆ. ಇಡ್ಯಾದ ಗಿರಿಜಾ ಮತ್ತು ಸೋಮನಾಥ ಎಂಬವರ ಮನೆಗೆ ಹಾನಿಯಾಗಿ ತಲಾ 1.50 ಲಕ್ಷ ರೂ. ನಷ್ಟವಾಗಿದೆ. ಪುತ್ತೂರಿನ ಬಾಲುಮೂಳೆ ಎಂಬಲ್ಲಿನ ಅಬೂಬಕರ್‌ರ ಮನೆಗೆ ಹಾನಿಯಾಗಿ 80 ಸಾವಿರ ರೂ. ನಷ್ಟವಾಗಿದೆ. ಕಡಬದ ಕಮಲರ ಮನೆಗೆ ಹಾನಿಯಾಗಿ 3,200 ರೂ. ಮತ್ತು ದೇವಕಿಯ ಮನೆಗೆ ಹಾನಿಯಾಗಿ 5 ಸಾವಿರ ರೂ. ನಷ್ಟವಾಗಿದೆ ಎಂದು ದ.ಕ.ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಮುಂದುವರಿದ ಕಾರ್ಯಾಚರಣೆ

ಕಂಕನಾಡಿಯಲ್ಲಿ ಸೋಮವಾರ ಸಂಜೆ ಬೃಹತ್ ಆಲದ ಮರ ಉರುಳಿದ ಬಳಿಕ ಬಿರುಸಿನ ಕಾರ್ಯಾಚರಣೆ ನಡೆದಿದ್ದರೂ ಪೂರ್ಣಗೊಂಡಿಲ್ಲ. ಮಂಗಳವಾರವೂ ಕಾರ್ಯಾಚರಣೆ ಮುಂದುವರಿದಿದೆ. ಇದರಿಂದ ಈ ಪ್ರದೇಶದಲ್ಲಿ ವಾಹನ ಸಂಚಾರ ಸಮಸ್ಯೆಯಾಗಿ ಉಳಿದಿದೆ. ಈ ಮಧ್ಯೆ ಮೆಸ್ಕಾಂನ ಕೆಲಸ ಕಾರ್ಯಮುಂದುವರಿದ ಕಾರಣ ಕಂಕನಾಡಿ ಆಸುಪಾಸಿನಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು.

ನಗರದ ಸಂತ ಅಲೋಶಿಯಸ್ ಕಾಲೇಜ್ ಆವರಣದ ಈಜುಕೊಳದ ಬಳಿಯ ಗುಡ್ಡ ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸೋಮವಾರ ಡೆಂಗ್‌ಗೆ ಬಲಿಯಾದ ಪತ್ರಕರ್ತ ನಾಗೇಶ್ ಪಡು ಅವರ ಮನೆಗೆ ಗುಡ್ಡ ಕುಸಿದು ಬಿದ್ದು ಹಾನಿಯಾಗಿವೆ. ಬಜ್ಪೆ ಸಮೀಪದ ಆದ್ಯಪ್ಪಾಡಿಯಲ್ಲೂ ಗುಡ್ಡ ಕುಸಿದಿದೆ.

ಅಬ್ಬಕ್ಕ ಪಡೆಯ ನೆರವು

ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಆರಂಭಿಸಲಾದ ಅಬ್ಬಕ್ಕ ಪಡೆ (ಮಹಿಳಾ ಪೊಲೀಸ್ ತಂಡ)ಯು ಮಂಗಳವಾರವೂ ಅಲ್ಲಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಿನ ಸಹಾಯ ಹಸ್ತ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಪಕ್ಷ-ಸಂಘಟನೆಗಳ ನೆರವು

ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿತ, ರಸ್ತೆಗಳಲ್ಲಿ ಹೊಂಡ, ಮನೆ ಕುಸಿತ ಇತ್ಯಾದಿ ದುರ್ಘಟನೆಯ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಶ್ರಮದಾನದ ಮೂಲಕ ನೆರವು ನೀಡಿ ಗಮನ ಸೆಳೆದಿದೆ.

ಗುರುಪುರ : ಇಲ್ಲಿನ ಮೂಳೂರು ಸೈಟ್ ಮಠದಗುಡ್ಡೆಯಲ್ಲಿ ಮರ ಮತ್ತು ಬಂಡೆ ಕಲ್ಲು ಕುಸಿದು ಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಇನ್ನೂ ಕೆಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ. ಮಮತಾ ಎಂಬವರ ಮನೆ ಮೇಲೆ ಮರ, ಗುಡ್ಡದ ಬಂಡೆ ಮತ್ತು ಮಣ್ಣು ಜರಿದು ಮನೆ ಸಂಪೂರ್ಣ ನೆಲಸಮಗೊಂಡಿದೆ. ಸೋಮವಾರ ಮುಸ್ಸಂಜೆಗೆ ಈ ದುರ್ಘಟನೆ ಸಂಭವಿಸಿದೆ. ಶಾಲೆಗೆ ಹೋಗುವ ಇಬ್ಬರು ಮಕ್ಕಳೊಂದಿಗೆ ಮಮತಾ ಮತ್ತು ಆರ್.ಕೆ. ಶರ್ಮ ಇದ್ದರು. ಗುಡ್ಡದ ಮಣ್ಣು, ಬಂಡೆ ಕಲ್ಲು ಬೀಳುತ್ತಲೇ ಮನೆಯಿಂದ ಓಡಿ ಹೋಗಿ ಪಾರಾಗಿದ್ದಾರೆ.

ಝಹುರಾ ಎಂಬವರ ಮನೆಯ ಹಿಂಬದಿಯ ಗುಡ್ಡದ ಬಂಡೆ, ಮಣ್ಣು ಜರಿದು ಬಿದ್ದಿದೆ. ಘಟನೆ ಸಂಭವಿಸಿದಾಗ ದಂಪತಿ, ಮಕ್ಕಳ ಸಹಿತ ಏಳು ಮಂದಿ ಇದ್ದರು. ಮಠದಗುಡ್ಡೆಯ ಉಸ್ಮಾನ್ ಎಂಬವರ ಮನೆ ಪಕ್ಕದ ಗುಡ್ಡೆ ಕುಸಿದು ಮನೆ ಅಪಾಯದಂಚಿಗೆ ಸಿಲುಕಿದೆ.

ಮಠದ ಸೈಟಿಗೆ ಹೋಗುವ ರಸ್ತೆ ಪಕ್ಕದ ಮೂರು ಕಡೆ ಗುಡ್ಡದ ಮಣ್ಣಿನೊಂದಿಗೆ ಬಂಡೆಗಳು ಕುಸಿದಿವೆ. ಇನ್ನು ಕೆಲವು ಬಂಡೆಗಳು ಕುಸಿಯುವ ಅಂಚಿನಲ್ಲಿದ್ದು, ಇವು ಕುಸಿದರೆ ರಸ್ತೆಯ ಮತ್ತೊಂದು ಬದಿಯಲ್ಲಿರುವ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ. ಪ್ರಕೃತಿ ವಿಕೋಪ ಭೀತಿಯಿಂದ ಈ ಪ್ರದೇಶದ ಕೆಲವು ಕುಟುಂಬಗಳು ಈಗಾಗಲೇ ಬೇರೆಡೆಗೆ ಗುಳೆ ಹೋಗಿವೆ.

ಕಂದಾಯ ನಿರೀಕ್ಷಕ ಆಸೀಫ್ ಇಕ್ಬಾಲ್ ಸೂಚನೆಯಂತೆ ಗ್ರಾಮ ಲೆಕ್ಕಾಧಿಕಾರಿ ಮಂಜುಳಾ, ಕಂದಾಯ ಇಲಾಖೆ ಸಿಬ್ಬಂದಿ ಅಶ್ರಫ್ ದುರ್ಘಟನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಈ ಸಂದರ್ಭ ಗುರುಪುರ ಗ್ರಾಪಂ ವಾರ್ಡ್ ಸದಸ್ಯ ರಾಜೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ವರ್ಷಕ್ಕಿಂತ ಹೆಚ್ಚು ಮಳೆ: ಕಳೆದ ವರ್ಷ ಜು.23ಕ್ಕೆ ಜಿಲ್ಲೆಯಲ್ಲಿ ಸರಾಸರಿ 31.8 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ 85.6 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಜು.23ರಂದು ಬಂಟ್ವಾಳ ತಾಲೂಕಿನಲ್ಲಿ 25.2 ಮಿ.ಮೀ. ಮತ್ತು ಈ ವರ್ಷ ಜು. 23ರಂದು 114.2 ಮಿ.ಮೀ. ಮಳೆ ಸುರಿದಿದೆ. ಅದಲ್ಲದೆ ಬೆಳ್ತಂಗಡಿಯಲ್ಲಿ ಈ ಬಾರಿ 68.1 ಮಿ.ಮೀ ಮತ್ತು ಕಳೆದ ಬಾರಿ 50.8 ಮಿ.ಮೀ., ಮಂಗಳೂರಿನಲ್ಲಿ ಈ ಬಾರಿ 106.7 ಮಿ.ಮೀ. ಮತ್ತು ಕಳೆದ ಬಾರಿ 13.3 ಮಿ.ಮೀ., ಪುತ್ತೂರಿನಲ್ಲಿ ಈ ಬಾರಿ 70.4 ಮಿ.ಮೀ. ಮತ್ತು ಕಳೆದ ಬಾರಿ 41.2 ಮಿ.ಮೀ., ಸುಳ್ಯದಲ್ಲಿ ಈ ಬಾರಿ 68.8 ಮಿ.ಮೀ. ಮತ್ತು ಕಳೆದ ಬಾರಿ 28.3 ಮಿ.ಮೀ. ಮಳೆ ಸುರಿದಿತ್ತು.

ತುಂಬಿ ತುಳುಕಿದ ನದಿಗಳು: ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ, ಕುಮಾರಧಾರ, ಪಯಸ್ವಿನಿ, ಫಲ್ಗುಣಿ ನದಿಗಳು ತುಂಬಿ ತುಳುಕಿವೆ. ಮರವೂರು ಮತ್ತು ತುಂಬೆ ಡ್ಯಾಂನಲ್ಲೂ ನೀರು ತುಂಬಿ ಹರಿಯುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X