ಬಾಲಕಿ ನಾಪತ್ತೆ
ಮಂಗಳೂರು, ಜು.24: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ 16 ವರ್ಷ ಪ್ರಾಯದ ಸ್ನೇಹಾ ಎಂಬಾಕೆ ಜು.14ರಂದು ಸಂಜೆ 4 ಗಂಟೆಯಿಂದ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಎಣ್ಣೆ ಕಪ್ಪುಮೈಬಣ್ಣದ, ಕೊಲುಮುಖದ, 5 ಅಡಿ ಎತ್ತರದ, ಕಪ್ಪು ಬಣ್ಣದ ಚೂಡಿದಾರ ಧರಿಸಿದ ಈಕೆ ಕನ್ನಡ, ತುಳು ಮಾತನಾಡುತ್ತಾಳೆ. ಈಕೆಯನ್ನು ಕಂಡಲ್ಲಿ ಪೊಲೀಸ್ ಆಯುಕ್ತರ ಕಚೇರಿ (ದೂ.ಸಂ: 0824-2220801, 2220800), ಮೂಡುಬಿದಿರೆ ಪೊಲೀಸ್ ಠಾಣೆ (ದೂ.ಸಂ: 08258-236333) ಇಲ್ಲಿಗೆ ತಿಳಿಸುವಂತೆ ಪ್ರಕಟನೆ ತಿಳಿಸಿದೆ.
Next Story





